• Slide
    Slide
    Slide
    previous arrow
    next arrow
  • ಜಲ ಜೀವನ ಮಿಷನ್ ಯೋಜನೆಯಲ್ಲಿ ವಿಹೆಚ್‍ಎಸ್‍ಸಿಗಳ ಪಾತ್ರ ಮಹತ್ವ; ಎಫ್.ಜಿ. ಚಿನ್ನಣ್ಣನವರ

    300x250 AD


    ಶಿರಸಿ: ಜಲ ಜೀವನ ಮಿಷನ್ ಯೋಜನೆಯಡಿ ಗ್ರಾಮಮಟ್ಟದಲ್ಲಿ ರಚಿಸಿರುವ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳಿಗೆ ತರಬೇತಿ ನೀಡುವ ಮೂಲಕ ಸಮಿತಿಗಳ ಬಲವರ್ಧನೆಗೊಳಿಸುತ್ತಿದ್ದು ಯೋಜನೆಯ ಯಶಸ್ಸಿನಲ್ಲಿ ಈ ಸಮಿತಿಗಳ ಪಾತ್ರ ಮಹತ್ವದ್ದಾಗಿದೆ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ ಹೇಳಿದರು.


    ಜಿಲ್ಲಾ ಪಂಚಾಯತ, ಗ್ರಾಮೀಣಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಸ್ಕೊಡ್‍ವೆಸ್ ಸಂಸ್ಥೆ ಸಹಯೋಗದಲ್ಲಿ ಇಲ್ಲಿನ ಇಸಳೂರು ಗ್ರಾಮಪಂಚಾಯತ ಸಭಾಭವನದಲ್ಲಿ ಹಮ್ಮಿಕೊಂಡ ಭೈರುಂಬೆ, ಇಸಳೂರು ಹಾಗೂ ಸದಾಶಿವಳ್ಳಿ ಗ್ರಾಮ ಪಂಚಾಯತಗಳ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಗಳ ಆಯ್ದ ಸದಸ್ಯರಿಗೆ ಹಮ್ಮಿಕೊಂಡಿದ್ದ ಯೋಜನೆಯಡಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


    ಪ್ರತಿ ಗ್ರಾಮೀಣ ಮನೆಗೂ ಶುದ್ದ ಹಾಗೂ ಸಮರ್ಪಕ ಕುಡಿಯುವ ನೀರನ್ನು ಕಾರ್ಯಾತ್ಮಕ ನಳ ಸಂಪರ್ಕದ ಮೂಲಕ ಕಲ್ಪಿಸುವ ಮಹತ್ವದ ಜಲ ಜೀವನ ಮಿಷನ್ ಯೋಜನೆಯ ಕುರಿತು ಸಮಿತಿಗಳು ಹೆಚ್ಚು ಹೆಚ್ಚು ಮಾಹಿತಿ ಪಡೆದುಕೊಂಡು ಸಕ್ರಿಯವಾಗಿ ಯೋಜನೆಯಲ್ಲಿ ಭಾಗಿಯಾಗಿ ಸಮುದಾಯ ವಂತಿಗೆ ಮೂಲಕ ಸಹಭಾಗಿತ್ವವನ್ನು ಪ್ರತಿ ಗ್ರಾಮದಲ್ಲಿ ಸಾಧಿಸಿ ಯೋಜನೆಯನ್ನು ಯಶಸ್ವಿಗೊಳಿಸಲು ಸಾಧ್ಯವಾಗುತ್ತದೆ ಎಂದರು.

    300x250 AD


    ಕಾರ್ಯಕ್ರಮದಲ್ಲಿ ಮಾತಾನಾಡಿದ ಇಸಳೂರು ಗ್ರಾಮ ಪಂಚಾಯತ ಅಧ್ಯಕ್ಷ ಪೂರ್ಣಿಮ ಭಟ್‍ರವರು ಯೋಜನೆಯ ಕುರಿತು ಜನ ಪ್ರತಿನಿಧಿಗಳಿಗೆ ಹಾಗೂ ಸಮಿತಿ ಸದಸ್ಯರಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು. ಬೈರುಂಬೆ ಗ್ರಾಮ ಪಂಚಾಯತ ಅಧ್ಯಕ್ಷ ರಾಘವೇಂದ್ರಎಸ್ ನಾಯ್ಕ ಮಾತನಾಡಿ ಯೋಜನೆಯ ಕುರಿತು ಸಂಸ್ಥೆಯಿಂದ ಸಾಕಷ್ಟು ಜಾಗೃತಿ ಮಾಹಿತಿ ದೊರೆಯುತ್ತಿದೆ. ಯೋಜನೆಯ ಕುರಿತು ಜನರ ವಿಶ್ವಾಸ ತುಂಬುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸೋಣ ಎಂದರು.

    ಸ್ಕೊಡ್‍ವೆಸ್ ಸಂಸ್ಥೆಯ ರಿಯಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸದಾಶಿವಳ್ಳಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಹಮ್ಮದ್‍ರಿಯಾಜ್, ಇಳಸೂರು ಗ್ರಾಮ ಪಂಚಾಯತ ಕಾರ್ಯದರ್ಶಿ ವೆಂಕಟರಮಣ ಶೆಟ್ಟಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರು ತರಬೇತಿಯಲ್ಲಿ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top