• Slide
    Slide
    Slide
    previous arrow
    next arrow
  • ಓಲಂಪಿಕ್ಸ್ ಬಾಕ್ಸಿಂಗ್; ಯುವ ಆಟಗಾರ್ತಿ ‘ಲವ್ಲಿನಾ’ಗೆ ಕಂಚು

    300x250 AD


    ಟೊಕಿಯೋ: ಜಪಾನ್‍ನಲ್ಲಿ ನಡೆಯುತ್ತಿರುವ ಟೊಕಿಯೋ ಒಲಿಂಪಿಕ್ಸ್ 2020 ಯಲ್ಲಿ ಮಹಿಳಾ ವಿಭಾಗದ ಬಾಕ್ಸಿಂಗ್‍ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆದ್ದು ದೇಶದ ಕೀರ್ತಿಯನ್ನು ಎತ್ತರಕ್ಕೇರಿಸಿದ್ದಾರೆ.

    ಲವ್ಲಿನಾ ಅವರು 0-5 ಅಂತರದಲ್ಲಿ ಬಾಕ್ಸಿಂಗ್ ಸೆಮಿಫೈನಲ್‍ನಲ್ಲಿ ಟರ್ಕಿಯ ಬುಸೆನಾಜ್ ಸುರ್ಮೆಲಿನ್ ಅವರು ಲವ್ಲಿನಾ ವಿರುದ್ಧ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಲವ್ಲಿನಾ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಆ ಮೂಲಕ ಲವ್ಲಿನಾ ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ಮೂರನೇ ಪದಕ ದೊರೆಯುವಂತೆ ಸಾಧನೆ ಮೆರೆದ ಕ್ರೀಡಾಪಟು ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಈ ಹಿಂದಿನ ಒಲಿಂಪಿಕ್ಸ್‍ಗಳಲ್ಲಿ ಭಾರತದ ವಿಜೇಂದರ್ ಸಿಂಗ್, ಎಂ. ಸಿ. ಮೆರಿ ಕೋಮ್ ಅವರು ಭಾರತಕ್ಕೆ ಬಾಕ್ಸಿಂಗ್‍ನಲ್ಲಿ ಪದಕ ಗೆದ್ದು, ಭಾರತದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದರು. ಇದೀಗ ಅವರ ಸಾಲಿನಲ್ಲಿ ಲವ್ಲಿನಾ ಸಹ ಸೇರ್ಪಡೆಯಾಗಿದ್ದಾರೆ.

    300x250 AD

    ಇನ್ನು ಲವ್ಲಿನಾ ಅವರ ಸಾಧನೆಗೆ ಅಭಿನಂದನೆಗಳನ್ನು ತಿಳಿಸಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೀರಿ. ಬಾಕ್ಸಿಂಗ್‍ನಲ್ಲಿ ಲವ್ಲಿನಾ ಬೊರ್ಗೊಹೈನ್ ಅವರ ಯಶಸ್ಸು ಹಲವಾರು ಭಾರತೀಯರಿಗೆ ಸ್ಪೂರ್ತಿ ನೀಡುತ್ತದೆ. ಅವರ ದೃಢತೆ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವ ರೀತಿ ಶ್ಲಾಘನೀಯ. ಟೊಕಿಯೋ ಒಲಿಂಪಿಕ್ಸ್‍ನಲ್ಲಿ ಕಂಚು ಗೆದ್ದ ಲವ್ಲಿನಾ ಅವರಿಗೆ ಅಭಿನಂದನೆಗಳು. ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಕೆಗಳು ಎಂದು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top