• Slide
  Slide
  Slide
  previous arrow
  next arrow
 • ಹಿಟ್ ಆಂಡ್ ರನ್ ಪ್ರಕರಣದಲ್ಲಿ ಮೃತಪಟ್ಟರೆ 2ಲಕ್ಷ ರೂ.ಪರಿಹಾರ; ಕೇಂದ್ರ ಸರ್ಕಾರ

  300x250 AD

  ನವದೆಹಲಿ: ಹಿಟ್ ಆಂಡ್ ರನ್ ಪ್ರಕರಣದಲ್ಲಿ ಕೊನೆಯುಸಿರೆಳೆದ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ನೀಡಲು ಮತ್ತು ಗಂಭೀರ ಗಾಯಗೊಂಡವರಿಗೆ 50 ಸಾವಿರ ರೂ.ಗಳನ್ನು ಪರಿಹಾರವಾಗಿ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

  ಈ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದು, ಪ್ರಸ್ತುತ ಹಿಟ್ ಆಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೃತಪಟ್ಟವರಿಗೆ 25 ಸಾವಿರ ರೂ., ಗಾಯಗೊಂಡವರಿಗೆ 12,500 ರೂ.ಗಳನ್ನು ನೀಡಲಾಗುತ್ತದೆ. ಇದನ್ನು ಮೃತಪಟ್ಟವರಿಗೆ 2 ಲಕ್ಷ ಮತ್ತು ಗಾಯಗೊಂಡವರಿಗೆ 50 ಸಾವಿರ ರೂ. ಗಳಿಗೆ ಏರಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

  2019 ರ ವರದಿಗಳಂತೆ ದೇಶದಲ್ಲಿ ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ 29,354 ಮಂದಿ ಸಾವಿಗೀಡಾಗಿದ್ದಾರೆ. 67,751 ಜನರಿಗೆ ಗಾಯಗಳಾಗಿರುವ ಬಗ್ಗೆ ಮಾಹಿತಿ ಇದೆ. ಅಪಘಾತ ಎಸಗಿ ಪರಾರಿಯಾದವರನ್ನು ಹಿಡಿಯಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಸರ್ಕಾರದ ವತಿಯಿಂದ ಮೋಟಾರ್ ವಾಹನ ಅಪಘಾತ ನಿಧಿ ಸ್ಥಾಪಿಸಿ ಆ ಮೂಲಕ ಪರಿಹಾರ ಒದಗಿಸುವುದಾಗಿ ಗಡ್ಕರಿ ಹೇಳಿದ್ದಾರೆ.

  300x250 AD

  ಹಾಗೆಯೇ ಮುಂದಿನ ಒಂದು ವರ್ಷಗಳೊಳಗೆ ವಾಹನ ತಯಾರಕರು ಫ್ಲೆಕ್ಸಿ ಫ್ಯೂಯೆಲ್ ವಾಹನಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡಲು ಗಡ್ಕರಿ ಕರೆ ಕೊಟ್ಟಿದ್ದಾರೆ. ಜೊತೆಗೆ ಎಲ್ಲಾ ವಾಹನಗಳಲ್ಲಿಯೂ ಕನಿಷ್ಠ 6 ಏರ್‍ಬ್ಯಾಗ್ ಇರುವಂತೆ ಗಮನ ಹರಿಸಲು ಅವರು ಸೂಚಿಸಿದ್ದಾರೆ.
  ನ್ಯೂಸ್ 13

  Share This
  300x250 AD
  300x250 AD
  300x250 AD
  Leaderboard Ad
  Back to top