• first
    second
    third
    previous arrow
    next arrow
  • ಅಕ್ರಮ ಗಾಂಜಾ ಮಾರಾಟ; 628 ಗ್ರಾಂ ಗಾಂಜಾ ಸಮೇತ ನಾಲ್ವರ ಬಂಧನ

    300x250 AD

    ಮುಂಡಗೋಡ: ತಾಲೂಕಿನ ಸಾಲಗಾಂವ ಗ್ರಾಮದಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಪೊಲೀಸರು ದಾಳಿ ನಡೆಸಿ, ಸುಮಾರು 628 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದು, ನಾಲ್ವರನ್ನು ಬಂಧಿಸಿದ್ದಾರೆ.

    ಸಾಲಗಾಂವಿನ ಗಂಗಪ್ಪ ಮಾಯಪ್ಪ ಪರಸಣ್ಣನವರ, ಹಾನಗಲ್ಲಿನ ಇಮ್ರಾನ ಅಹ್ಮದ ಮಕ್ಬುಲ್ ಅಹ್ಮದ ಬ್ಯಾಡಗಿ, ಅಕ್ಕಿ ಆಲೂರಿನ ಮಹಮ್ಮದ ಇರ್ಪಾನ ಅಬ್ದುಲ ಖಾದರ, ಶೇಖ ಮಹ್ಮದ ಅಶ್ಪಕ್ ಆರೋಪಿತರು. ಸಾಲಗಾಂವ ಬಳಿ ಗಾಂಜಾ ಮಾರಾಟಕ್ಕೆ ಪ್ರಯತ್ನ ನಡೆಸುತ್ತಿದ್ದರು ಎಂಬ ಮಾಹಿತಿ ತಿಳಿದ ಪೊಲೀಸರು ದಾಳಿ ಮಾಡಿ 628 ಗ್ರಾಂ ಗಾಂಜಾವನ್ನು ಜಪ್ತು ಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ

    300x250 AD

    ರವಿ ನಾಯ್ಕ, ಡಿ.ಎಸ್.ಪಿ. ಸಿರ್ಸಿ ರವರ ಮಾರ್ಗದರ್ಶನದಲ್ಲಿ ಮುಂಡಗೋಡ ಪೆÇಲೀಸ್ ಠಾಣೆಯ ಪೆÇಲೀಸ್ ನಿರೀಕ್ಷಕ ಪ್ರಭುಗೌಡ. ಡಿ. ಕೆ, ಪಿ.ಎಸ್.ಐ. ಬಸವರಾಜ ಮಬನೂರ ಹಾಗೂ ಸಿಬ್ಬಂದಿಗಳಾದ ಧರ್ಮರಾಜ ನಾಯ್ಕ, ಗಣಪತಿ ಹುನ್ನಳ್ಳಿ, ಶರತ ದೇವಳಿ, ವಿನೋದಕುಮಾರ, ಅರುಣ ಬಾಗೇವಾಡಿ, ತಿರುಪತಿ ಚೌಡಣ್ಣವರ, ಅಣ್ಣಪ್ಪ ಬುಡಗೇರ, ಗಿರೀಶ ಎಸ್.ಎಮ್ ಇವರು ಭಾಗವಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top