
ಕುಮಟಾ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವಕನೋರ್ವ ಈಜಲು ತೆರಳಿದ ಸಂದರ್ಭದಲ್ಲಿ ಸಮುದ್ರದ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿರುವ ಘಟನೆ ಮಂಗಳವಾರ ತಾಲೂಕಿನ ಗೋಕರ್ಣದ ಪ್ಯಾರಡೈಸ್ ಬೀಚ್‍ನಲ್ಲಿ ನಡೆದಿದೆ.
ಅದ್ವೈತ ಜೈನ ಮೃತ ಯುವಕ ಎಂದು ತಿಳಿದುಬಂದಿದೆ. ಈತ ಮುಂಬೈನಿಂದ ಆರು ಜನ ಸ್ನೇಹಿತರೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದು, ಸ್ನೇಹಿತರೊಂದಿಗೆ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಈ ಘಟನೆ ನಡೆದಿದೆ. ಘಟನೆಯ ಸ್ಥಳಕ್ಕೆ ಗೋಕರ್ಣ ಪೆÇಲೀಸ್ ಠಾಣೆಯ ಪೆÇಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಷ್ಟೇ ಎಚ್ಚರಿಕೆ ನೀಡುತ್ತಿದ್ದರೂ, ಅವೆಲ್ಲವನ್ನೂ ಲೆಕ್ಕಿಸದೇ ನೀರಿಗಿಳಿದು ಪ್ರವಾಸಿಗರು ಅಪಘಾತವನ್ನು ಮೈಮೇಲೆ ಎಳೆದುಕೊಳ್ಳುವುದು ದುರದೃಷ್ಟದ ಸಂಗತಿಯಾಗಿದೆ