
ಶಿರಸಿ: ತಾಲೂಕಿನಲ್ಲಿ ಇಂದು 11 ಕರೋನಾ ಪಾಸಿಟಿವ್ ದಾಖಲಾಗಿದ್ದು ಕಡಬಾಳ 1, ಕೂರ್ಸೆ ಕಂಪೌಂಡ್ 1, ಗೋಪಿನಮರಿ 1, ಮೇಲಿನ ಓಣಿಕೇರಿ 1, ಟಿಎಸ್ಸೆಸ್ ಹಾಸ್ಪಿಟಲ್ 1, ಟಿಎಸ್ಸೆಸ್ ರೋಡ್ 1, ಕೆ ಎಚ್ ಬಿ ನ್ಯೂ ಕಾಲನಿ 2, ಹಂಚಿನಕೇರಿಯಲ್ಲಿ 3 ಮಂದಿಗೆ ಕರೋನಾ ಸೋಂಕು ದೃಢಪಟ್ಟಿದೆ. 39 ಮಂದಿ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನಲ್ಲಿ ಇಂದು ಒಟ್ಟೂ 836 ಮಂದಿಗೆ ಕೋವಿಡ್ ಟೆಸ್ಟ್ ನಡೆಸಲಾಗಿದ್ದು ಅದರಲ್ಲಿ 95 ರ್ಯಾಪಿಡ್ ಟೆಸ್ಟ್ ಹಾಗೂ 741 RTPCR ಟೆಸ್ಟ್ ಮಾಡಲಾಗಿದೆ.
ಇನ್ನು ತಾಲೂಕಿನ 5 ಮಂದಿ ಕರೋನಾದಿಂದ ಗುಣಮುಖರಾಗಿದ್ದು ಸ್ಕ್ಯಾನ್ ಸೆಂಟರ್ ನಿಂದ 1, ಹಾಗೂ ಸರ್ಕಾರಿ ಆಸ್ಪತ್ರೆಯಿಂದ 4 ಮಂದಿ ಚೇತರಿಸಿಕೊಂಡಿದ್ದಾರೆ.
ಇಲ್ಲಿಯವರೆಗೆ ತಾಲೂಕಿನಲ್ಲಿ ಒಟ್ಟೂ 6,981 ಕರೋನಾ ಪಾಸಿಟಿವ್ ಕೇಸ್ ದಾಖಲಾಗಿದೆ. ಹಾಗೂ 6,871 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು ರಿಕವರಿ ರೇಟ್ ಶೇಕಡಾ 98 ರಷ್ಟಿದೆ.