• first
  second
  third
  previous arrow
  next arrow
 • ರೂಪಾಲಿಗೆ ಮಂತ್ರಿ ಸ್ಥಾನ ನೀಡಲು ಜಿಲ್ಲಾ ಕ್ಷತ್ರಿಯಾ ಮರಾಠ ಸಮುದಾಯ ಆಗ್ರಹ

  300x250 AD

  ಕಾರವಾರ: ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ 4 ವಿಧಾನಸಭಾ ಕ್ಷೇತ್ರಗಳಾದ ಹಳಿಯಾಳ-ಜೋಯಿಡಾ, ಯಲ್ಲಾಪುರ- ಮುಂಡಗೊಡ-ಬನವಾಸಿ, ಹಾಗೂ ಶಿರಸಿ-ಸಿದ್ದಾಪುರ ಮತ್ತು ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಕ್ಷತ್ರಿಯಾ ಮರಾಠಾ ಸಮುದಾಯ ಹಾಗೂ ಆ ಸಮುದಾಯದ ಉಪಪಂಗಡದ ಮತದಾರರು ನಿರ್ಣಯಕರಾಗಿದ್ದಾರೆ. ಹಾಗಾಗಿ ನಮ್ಮ ಸಮುದಾಯದ ಕಾರವಾರ ಕ್ಷೇತ್ರದ ಕ್ರಿಯಾಶೀಲ ಶಾಸಕಿ ರೂಪಾಲಿ ನಾಯ್ಕ ಗೆ ನೂತನ ಸಂಪುಟದಲ್ಲಿ ಮಂತ್ರಿಮಾಡುವಂತೆ ಜಿಲ್ಲೆಯ ಮರಾಠ ಸಮುದಾಯದ ನಾಯಕ ಪಾಂಡುರಂಗ ವಿ ಪಾಟೀಲ್ ವಿನಂತಿಸಿದ್ದಾರೆ.

  ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಸ್ವಕ್ಷೇತ್ರ ಹಾವೇರಿ ಜಿಲ್ಲೆಯ ಶಿಗ್ಗಾಂವ, ಸವಣೂರು ತಾಲೂಕಿನ ಮರಾಠ ಸಮುದಾಯದ ಮುಖಂಡರ ಮೂಲಕ ಕಾರವಾರ ಶಾಸಕಿ ರೂಪಾಲಿ ನಾಯಕಗೆ ಮರಾಠಾ ಕೋಟಾದಲ್ಲಿ ಮಂತ್ರಿಮಾಡುವಂತೆ ವಿನಂತಿಸಿದ್ದಾರೆ.

  300x250 AD

  ಶಂಕ್ರಪ್ಪನವರ ವರದಿ ಜಾರಿಗೆ ಆಗ್ರಹ: ಕಳೆದ ಹಲವಾರು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿರುವ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶಂಕ್ರಪ್ಪನವರ ವರದಿಯಂತೆ 3ಬಿ ಯಲ್ಲಿರುವ ಮರಾಠ ಸಮುದಾಯವನ್ನು 2ಎಗೆ ಬರುವಂತೆ ಶಂಕ್ರಪ್ಪನವರ ವರದಿಯನ್ನು ಕೂಡಲೇ ಜಾರಿಗೆಗೊಳಿಸುವಂತೆ ಸಹ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನಕ್ಕೆ ತಂದಿರುವುದಾಗಿ ಪಾಟೀಲ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Back to top