• Slide
    Slide
    Slide
    previous arrow
    next arrow
  • ವಾಹನ ಡಿಕ್ಕಿ; ಜಾನುವಾರು ಸ್ಥಳದಲ್ಲೇ ಸಾವು

    300x250 AD

    ಮುಂಡಗೋಡ: ರಸ್ತೆಯ ಪಕ್ಕದಲ್ಲಿ ಮಲಗಿದ್ದ ಎತ್ತು ಹಾಗೂ ಒಂದು ಹೋರಿಗೆ ಅಪರಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಎರಡು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಮಳಗಿ ಗ್ರಾಮದ ಪೆÇಲೀಸ ಠಾಣೆಯ ಎದುರು ಸೋಮವಾರ ಬೆಳಗಿನಜಾವ ನಡೆದಿದೆ.

    ಮಳಗಿ ಗ್ರಾಮದ ಲಕ್ಕಪ್ಪ ಕಚವಿ ಎಂಬುವರಿಗೆ ಸೇರಿದ ಒಂದು ಎತ್ತು ಹಾಗೂ ಮಳಗಿ ಗ್ರಾಮದ ಸಿದ್ಧಾಪುರ ಓಣಿಯ ಬಸವಣ್ಣ ದೇವರಿಗೆ ಬಿಟ್ಟ ಮತ್ತೊಂದು ಹೊರಿಯಾಗಿದೆ. ರವಿವಾರ ರಾತ್ರಿ ರಸ್ತೆಯ ಪಕ್ಕದಲ್ಲಿ ಎತ್ತು ಹಾಗೂ ಹೋರಿ ಮಲಗಿದ್ದವು. ಬೆಳಗಿನ ಜಾವ ಅಪರಿಚಿತ ವಾಹನವು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಡಿಕ್ಕಿ ಹೊಡೆದ ಪರಿಣಾಮ ಹೋರಿ ಮತ್ತು ಎತ್ತು ಸ್ಥಳದಲ್ಲಿಯೇ ಹಿಂದೆ ಮುಂದೆ ಬಿದ್ದು ಸಾವನ್ನಪ್ಪಿವೆ. ಜಾನುವಾರುಗಳ ಮಾಲೀಕರು ಮನೆಯಲ್ಲಿ ಕಟ್ಟದೆ ಬೀದಿಗಳಲ್ಲಿ ಬಿಟ್ಟಿರುವುದರಿಂದ ಮತ್ತು ವಾಹನ ಚಾಲಕರ ನಿಷ್ಕಾಳಜಿ ಚಾಲನೆಯಿಂದ ಅನಾವಶ್ಯಕವಾಗಿ ಎರಡು ಜಾನುವಾರಗಳು ಸಾವನ್ನಪ್ಪಿದ್ದಂತಾಯಿತು ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

    300x250 AD

    ಗ್ರಾಮ ಪಂಚಾಯಿತಿಯವರು ಇನ್ನು ಮುಂದಾದರು ಬೀಡಾಡಿ ಜಾನುವಾರಗಳ ಬಗ್ಗೆ ಕಾಳಜಿವಹಿಸಿ ಜಾನವಾರುಗಳ ಮಾಲೀಕರಿಗೆ ತಾಕೀತು ಮಾಡಿ ತಮ್ಮ ಮನೆಗಳಲ್ಲಿ ಜಾನುವರಗಳನ್ನು ಕಟ್ಟುವ ಹಾಗೆ ಮಾಡುವಂತೆ ಆಗಬೇಕು. ಈ ಬಗ್ಗೆ ಗ್ರಾ.ಪಂ ಅವರು ಸೂಕ್ತ ಕ್ರಮ ವಹಿಸಿಬೇಕೆಂದು ಪ್ರಾಣಿಪ್ರಿಯರು ಒತ್ತಾಯಿಸಿದ್ದಾರೆ

    Share This
    300x250 AD
    300x250 AD
    300x250 AD
    Leaderboard Ad
    Back to top