• Slide
    Slide
    Slide
    previous arrow
    next arrow
  • ನೆರೆ ವೀಕ್ಷಣೆಗೆ ಬಂದ ಸಿದ್ದರಾಮಯ್ಯ ವ್ಯಂಗ್ಯ ಹೇಳಿಕೆಗೆ ನಾಗರಾಜ ನಾಯಕ ಖಂಡನೆ

    300x250 AD

    ಯಲ್ಲಾಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಕೆಲವು ಪ್ರದೇಶಗಳಲ್ಲಿ ಓಡಾಡಿ, ತಮ್ಮ ಎಂದಿನ ವ್ಯಂಗ್ಯ, ಹಾಸ್ಯ, ತಾತ್ಸಾರದ ಮಾತಿನಲ್ಲೇ ನೆರಪೀಡಿತರಾಗಿರುವ ಸರ್ಕಾರವೆಂದು ಹೇಳಿದ್ದನ್ನು ಜಿಲ್ಲಾ ಬಿಜೆಪಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮತ್ತು ಜಿಲ್ಲಾ ವಕ್ತಾರ ನಾಗರಾಜ ನಾಯಕ ಹೇಳಿದರು.

    ಅವರು ಆ.3 ರಂದು ಪಟ್ಟಣದ ಎಪಿಎಂಸಿ ಆವಾರದ ಅಡಕೆ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
    ಜಿಲ್ಲೆಯಲ್ಲಿ ನಮ್ಮ ಪಕ್ಷದ ಸಚಿವ ಶಿವರಾಮ ಹೆಬ್ಬಾರ ಇರಲಿ, ಶಾಸಕರಿರಲಿ, ಪಕ್ಷದ ಯಾವುದೇ ಪದಾಧಿಕಾರಿಗಳು ಕೂಡ ಜನಸಾಮಾನ್ಯರ ಬದುಕಿಗೆ, ಆಪತ್ತಿನಲ್ಲಿ ಸಿಲುಕಿದವರಿಗೆ ನಿರೀಕ್ಷೆ ಮೀರಿ ಸಹಾಯ ಮಾಡುತ್ತಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಉತ್ತರಕನ್ನಡದ ಭೀಕರ ಪ್ರವಾಹ ಕುರಿತು ಅರಿತ ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಬಂದು ಪ್ರವಾಹದಿಂದ ಕೊಚ್ಚಿಹೋದ ಜಿಲ್ಲೆಯ ಸ್ಥಿತಿಗತಿಯ ಪರಿಶೀಲನೆ ನಡೆಸಿ, 200 ಕೋಟಿ ರೂ.ಹಣ ಮಂಜೂರಿ ಮಾಡುವುದಾಗಿ ಘೋಷಿಸಿದ್ದಾರೆ.

    ಇಂತಹ ಕ್ರಿಯಾಶೀಲ ನಮ್ಮ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಜಿಲ್ಲೆಯನ್ನು 23 ವರ್ಷಕ್ಕಿಂತ ಅಧಿಕ ಅವಧಿಯಲ್ಲಿ ಜಿಲ್ಲಾ ಸಚಿವರಾಗಿ ಏನು ಕೊಡುಗೆ ನೀಡದ ಹತಾಶೆಗೊಂಡು ಕೇವಲ ತಮ್ಮ ಸ್ವಾರ್ಥಕ್ಕಾಗಿ ಮಗನಿಗೆ ರಾಜಕೀಯ ಮರುಹುಟ್ಟು ನೀಡುವ ಉದ್ದೇಶದಿಂದ ಕಾರವಾರ ಮತ್ತು ಯಲ್ಲಾಪುರದಲ್ಲಿ ಕೇವಲ ಕಷ್ಟದಲ್ಲಿದ್ದ ಜನರಿಗೆ ಸ್ಪಂದಿಸುವ ನೆಪವೊಡ್ಡಿ, ಮೊಸಳೆಕಣ್ಣೀರು ಸುರಿಸಿ, ಸರ್ಕಾರದ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

    ದೇಶಪಾಂಡೆಯವರು ಬಹುದೀರ್ಘ ಕಾಲದವರೆಗೆ ಜಿಲ್ಲೆಯನ್ನಾಳಿದ್ದಾರೆ. ಜಿಲ್ಲೆಗೆ ಅವರು ನೀಡಿದ ಕೊಡುಗೆ ಏನು? ಏನು ಅಭಿವೃದ್ಧಿ ಮಾಡಿದ್ದಾರೆ? ಒಂದು ಆಸ್ಪತ್ರೆಯನ್ನೂ ಸಹಿತ ಮಾಡಲಾಗಿಲ್ಲ. ಇಂತಹ ಹಿರಿಯ ನಾಯಕರಾದ ಅವರು, ಹಳಿಯಾಳದಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತ ಪಕ್ಷದ ಮುಖಂಡರಾದ ಘೋಟ್ನೇಕರ್ ಇವರ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಇಂತಹ ಸ್ಥಿತಿಯಲ್ಲಿ ಮಗನಿಗೆ ರಾಜಕೀಯ ಜನ್ಮ ನೀಡಲು ಮುಂದಾಗಿದ್ದಾರೆ. ಇದು ಜಿಲ್ಲೆಯ ಪ್ರಬುದ್ಧ ಮತದಾರರಿಗೆ ಅರ್ಥವಾಗುವುದಿಲ್ಲವೇ? ಎಂದರು.
    ಪ್ರಕೃತಿ ವಿಕೋಪದಿಂದ ತೀವ್ರ ಹಾನಿಯಾದ ಜಿಲ್ಲೆಯ ಪರಿಸ್ಥಿತಿ ಅವಲೋಕನಕ್ಕಾಗಿ ಮುಖ್ಯಮಂತ್ರಿಗಳನ್ನು ಶಿವರಾಮ ಹೆಬ್ಬಾರ ಹಾಗೂ ಜಿಲ್ಲೆಯ ಎಲ್ಲ ಶಾಸಕರು ಸೇರಿ ಕರೆತಂದಿದ್ದಾರೆ. ಹಾಗೆಯೇ ಜನರ ಸಂಕಷ್ಟಕ್ಕೆ ನಮ್ಮ ಪಕ್ಷದ ಕೆಳಹಂತದ ಕಾರ್ಯಕರ್ತರಿಂದ ಶಾಸಕರಾದಿಯಾಗಿ ಸಚಿವರವರೆಗೂ ತೀವೃಗತಿಯಲ್ಲಿ ಸ್ಪಂದಿಸುತ್ತಿದ್ದಾರೆ.

    300x250 AD

    ಸೀಬರ್ಡ್ ನಿರಾಶ್ರಿತರಿಗೆ 30 ವರ್ಷಗಳಿಂದ ಸಮರ್ಪಕ ಪರಿಹಾರ ನೀಡದೇ, ದೇಶಪಾಂಡೆ ತೀವ್ರ ಅನ್ಯಾಯವೆಸಗಿದ್ದಾರೆ. ಇನ್ನು ಅವರೆಲ್ಲ ಸಂಕಷ್ಟದಲ್ಲಿದ್ದಾರೆ. ಬೇರೆಯವರ ಕುರಿತು ಮಾತನಾಡುವ ದೇಶಪಾಂಡೆ, ಜಿಲ್ಲೆಯ ಜನತೆಗೆ ಏನು ಕೊಡುಗೆ ನೀಡಿದ್ದಾರೆ. ಶಾಸಕರಾದ ಅವರು, ಮುಖ್ಯಮಂತ್ರಿ ಆಗಮಿಸಿದಾಗ ಜಿಲ್ಲೆಯ ಸ್ಥಿತಿ ಕುರಿತು ತಾವು ಭಾಗವಹಿಸಿ, ಅವರಿಗೆ ಮನವಿ ನೀಡಿ, ಹೆಚ್ಚಿನ ಒತ್ತಡ ಹೇರಬಹುದಿತ್ತಲ್ಲ. ಸರ್ಕಾರ ನೆರಪೀಡಿತವೆಂದು ಹೇಳಲು ಕಾಂಗ್ರೆಸ್ಸನವರಿಗಾಗಲೀ ಸಿದ್ದರಾಮಯ್ಯನವರಿಗಾಗಲೀ ನೈತಿಕತೆ ಇಲ್ಲವೇ ಇಲ್ಲ ಎಂದರು.
    ನಮ್ಮ ಪಕ್ಷದಲ್ಲಿ ಒಂದು ಶಿಸ್ತಿನ ಚೌಕಟ್ಟಿದೆ. ನಮ್ಮ ಸಿದ್ಧಾಂತದ ಮೇಲೆ ನಂಬಿಗೆಯಿಟ್ಟು ಪಕ್ಷಕ್ಕೆ ಬಂದವರೆಲ್ಲ ಒಂದೇ ಪಕ್ಷದ ವ್ಯಕ್ತಿಗಳು ನಾವೆಲ್ಲ. ವಲಸಿಗರು, ಮೂಲದವರು ಬೇರೆ ಎನ್ನುವುದಿಲ್ಲ ವ್ಯಕ್ತಿ ಪೂಜೆ ಎನ್ನುವುದು ಇಲ್ಲವೇ ಇಲ್ಲ ಎಂದರು.

    ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಪ್ರಧಾನ ಕಾರ್ಯದರ್ಶಿಗಳಾದ ರವಿ ಭಟ್ಟ, ಪ್ರಸಾದ ಹೆಗಡೆ, ಕಾರ್ಯದರ್ಶಿ ನಟರಾಜ ಗೌಡರ್, ರೈತ ಮೋರ್ಚಾ ಅಧ್ಯಕ್ಷ ರಾಮಚಂದ್ರ ಚಿಕ್ಯಾನಮನೆ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top