• Slide
    Slide
    Slide
    previous arrow
    next arrow
  • ಮಾಜಿ ಸೈನಿಕರ ಮಕ್ಕಳಿಗೆ ಲಯನ್ಸ್ ಶಾಲೆಯಲ್ಲಿ ಶುಲ್ಕ ರಿಯಾಯಿತಿ; ರವಿ ನಾಯಕ್

    300x250 AD

    ಶಿರಸಿ: ಬಿಯಾಂಡ್ ಅಕಾಡೆಮಿಕ್ಸ್ ‘ಲೋಚನ’ ಶಿರಸಿ ಲಯನ್ಸ್ ಕ್ಲಬ್, ಶಿರಸಿ ರೋಟರಿ ಕ್ಲಬ್, ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿ ಸಹಯೋಗದಲ್ಲಿ ಪ್ರಸಾರಗೊಳ್ಳುತ್ತಿರುವ ಈ ವಿನೂತನ ಕಾರ್ಯಕ್ರಮಕ್ಕೆ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ವಜ್ರ ಮಹೋತ್ಸವದ ಹಿನ್ನೆಲೆಯಲ್ಲಿ ಶಿರಸಿಯಲ್ಲಿಯೇ ವಾಸಿಸುತ್ತಿರುವ ಸ್ವಾತಂತ್ರ್ಯ ಯೋಧರ, ಸ್ವತಂತ್ರ ಭಾರತದ ವಿವಿಧ ಯುದ್ದಗಳಲ್ಲಿ ಪಾಲ್ಗೊಂಡ ಮಾಜಿ ಯೋಧರ ಸಂದರ್ಶನವನ್ನು ಲಯನ್ಸ್ ಶಾಲೆಯಲ್ಲಿ ನಡೆಸಲಾಯಿತು.

    ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ಮೂಡಿಬರುವ ಲೋಚನ ಕಾರ್ಯಕ್ರಮದ ಏಳನೇ ಸಂಚಿಕೆಯನ್ನು ವೈಶಿಷ್ಟ್ಯ ಪೂರ್ಣಗೊಳಿಸುವ ಉದ್ದೇಶದಿಂದ ಸುಬೇದಾರ್ ರಾಮು, ರವಿ ಬಿ. ಕಾನಿಟ್ಕರ್, ರಾಮಾ ಬಿ.ನಾಯ್ಕ, ವಿನಾಯಕ ಶೆಟ್ಟಿ, ಶಿವಪ್ಪ ಬಡಿಗೇರ್ ಈ ಮಾಜಿ ಯೋಧರನ್ನು ಸಂದರ್ಶಿಸಲಾಯಿತು.

    ಈ ಸಂದರ್ಭದಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಪೆÇ್ರಫೆಸರ್ ಲ. ರವಿ ನಾಯಕ್ ಅವರು ಮಾತನಾಡುತ್ತ ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಶಿರಸಿ ಲಯನ್ಸ ಶಾಲೆಯಲ್ಲಿ ಅಭ್ಯಸಿಸುತ್ತಿರುವ ಮಾಜಿ ಯೋಧರ ಮಕ್ಕಳಿಗೆ- ಅವರ ಶುಲ್ಕದಲ್ಲಿ ಶೇಕಡಾ 35 ರಷ್ಟನ್ನು ವಿನಾಯಿತಿ ನೀಡುವ ನಿರ್ಧಾರ ಪ್ರಕಟಿಸಿದರು. ಮುಮದುವರಿದು ಮಾತನಾಡಿ ಯೋಧರ ಋಣ ಸಾಮಾನ್ಯ ಜನರಿಂದ ತೀರಿಸಲು ಸಾಧ್ಯವಿಲ್ಲ. ಸಾಮಾನ್ಯ ಜನ ಜೀವನವನ್ನು ನೆಮ್ಮದಿಯಾಗಿರಿಸಿದ ಯೋಧ ಹಾಗೂ ಯೋಧರ ಸೇವೆ ಅನುಪಮವಾದದ್ದು. ರೈತರು ಹಾಗೂ ಯೋಧರು ನಾಡಿನ ರಕ್ಷಣೆಯಲ್ಲಿ ಬಹುದೊಡ್ಡ ಪಾಲನ್ನು ಹೊತ್ತಿರುವವರೆಂದು ಗೌರವಪೂರ್ವಕವಾಗಿ ನುಡಿದರು. ರೈತ ಹಾಗೂ ಯೋಧರಿಂದಾಗಿಯೇ ನಮ್ಮ ದೇಶ ಸುಭಿಕ್ಷವಾಗಿ, ಸುರಕ್ಷಿತವಾಗಿ ಇರಲು ಸಾಧ್ಯವಾಗಿದೆ. ಇವರ ಋಣವನ್ನು ಯಾವ ರೀತಿಯಿಂದಲೂ ತೀರಿಸಲು ಸಾಧ್ಯವಿಲ್ಲವೆಂದು ಹೇಳಿದರು.

    300x250 AD

    ಶಾಲೆಯ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಡೆಸಿಕೊಟ್ಟರು.

    Share This
    300x250 AD
    300x250 AD
    300x250 AD
    Leaderboard Ad
    Back to top