
eUK ವಿಶೇಷ: ಕಳೆದ ವಾರ ಪ್ರಧಾನಿ ಮೋದಿಯನ್ನು ಸಿಎಮ್ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಅಭಿನಂದಿಸಿ ತೊಡಿಸಿದ್ದ ವಿಶೇಷ ರೀತಿಯ ಗಂಧದ ಮಾಲೆಯೊಂದು ರಾಷ್ಟ್ರಮಟ್ಟದಲ್ಲಿ ಬಹುತೇಕರ ಗಮನ ಸೆಳೆದಿತ್ತು. ಈ ಕುರಿತು ಅಚ್ಛರಿ ಮಾಹಿತಿಯೊಂದು ದೊರಕಿದ್ದು, ಪ್ರಧಾನಿ ಮೋದಿ ಧರಿಸಿದ ಗಂಧದ ಮಾಲೆ ಶಿರಸಿ ಗುಡಿಗಾರರ ಕೈಯ್ಯಲ್ಲರಳಿದ್ದು ಎಂಬುದು ಈಗ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೇಲೆ ಮೊದಲ ಬಾರಿ ಪ್ರಧಾನಿ ಮೋದಿಯನ್ನು ಭೆಟ್ಟಿಯಾಗಿದ್ದರು. ಈ ವೇಳೆ ಅವರಿಬ್ಬರು ಒಟ್ಟಿಗೆ ನಿಂತಿರುವ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಗ ಪ್ರಧಾನಿ ಮೋದಿ ಧರಿಸಿದ್ದ ಗಂಧದ ಮಾಲೆ ವಿಶೇಷ ಆಕರ್ಷಣೆ ಎಂಬುದು ಬಹುತೇಕರ ಮನದಾಳದ ಮಾತಾಗಿತ್ತು.
ಈ ಕುರಿತು ನ್ಯೂ ಇಂಡಿಯನ್ ಎಕ್ಸಪ್ರೆಸ್ ಮಂಗಳವಾರ ಮುಂಜಾನೆ ವರದಿ ಮಾಡಿದ್ದು, ಪ್ರಧಾನಿ ಮೋದಿ ಧರಿಸಿದ್ದ ಗಂಧದ ಮಣಿಪುಷ್ಪ ಮಾಲೆಯು ಶಿರಸಿಯ ಗುಡಿಗಾರರೊಬ್ಬರ ಕೈಯಲ್ಲಿ ಅರಳಿದ್ದಾಗಿದೆ. ರಾಜ್ಯ ಸರಕಾರ ನಡೆಸುವ ಕಾವೇರಿ ಎಂಪೋರಿಯಮ್ ಮೂಲಕ ಈ ಗಂಧದ ಮಣಿಪುಷ್ಪ ಮಾಲೆಯನ್ನು ಸಿಎಮ್ ಬಸವರಾಜ ಬೊಮ್ಮಾಯಿ ಖರೀದಿಸಿದ್ದರು. ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಷಾ ಹಾಗು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾರವರಿಗೆ ಸಿಎಮ್ ಬಸವರಾಜ ಬೊಮ್ಮಾಯಿ ಶಿರಸಿಯಲ್ಲಿ ತಯಾರಾದ ಗಂಧದ ಮಣಿಪುಷ್ಪ ಮಾಲೆಯನ್ನು ಹಾಕಿ, ಗೌರವಿಸಿದ್ದರು.
ಈ ಕುರಿತಾಗಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ಪ್ರಕಟಿಸಿದ ವರದಿ ಇಲ್ಲಿದೆ:
https://www.newindianexpress.com/states/karnataka/2021/aug/03/cm-makes-a-statement-with-unique-sirsi-garlands-2339332.html