• Slide
    Slide
    Slide
    previous arrow
    next arrow
  • ಕುಳವೆ ಗ್ರಾ.ಪಂ ವ್ಯಾಪ್ತಿಯಲ್ಲಿ ಲಸಿಕಾಭಿಯಾನ ಯಶಸ್ವಿ

    300x250 AD

    ಶಿರಸಿ: ಕೊರೊನಾ ಲಸಿಕೆಯು ಗ್ರಾಮೀಣ ಮಟ್ಟದ ಜನರಿಗೆ ಲಭ್ಯವಾಗಬೇಕು ಎಂಬ ಕಾರಣಕ್ಕಾಗಿ ವಿಧಾನಸಭಾಧ್ಯಕ್ಷರ ಸಹಕಾರದಿಂದ ತಾಲೂಕಿನ ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸೋಮವಾರ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

    ಕುಳವೆ ಗ್ರಾಮ ಪಂಚಾಯತದ ಆವಾರದಲ್ಲಿ ನಡೆದ ಲಸಿಕಾ ಅಭಿಯಾನದಲ್ಲಿ ಒಟ್ಟೂ 250 ಜನರು ಕೊವಿಶೀಲ್ಡ್ ಹಾಗೂ ಕೊವಾಕ್ಸಿನ್ ಲಸಿಕೆ ಪಡೆದುಕೊಂಡರು. ಸ್ಥಳೀಯ ಉಂಚಳ್ಳಿ ಹಾಗೂ ಸುಗಾವಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಪಂಚಾಯತಕ್ಕೆ ಆಗಮಿಸಿ ಪಂಚಾಯತ ಅಧ್ಯಕ್ಷ, ಸದಸ್ಯರ ನೇತೃತ್ವದಲ್ಲಿ ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

    ಲಸಿಕೆಯ ಕೊರತೆಯಿಂದ ಗ್ರಾಮೀಣ ಭಾಗದ ಜನರಿಗೆ ಎರಡನೇ ಡೋಸ್ ಲಸಿಕೆ ಸಿಗದೇ ಸಮಸ್ಯೆಯಾಗಿತ್ತು. ಇದನ್ನು ಮನಗಂಡು ಅಧ್ಯಕ್ಷ ವಿನಯ ಭಟ್ ಹಾಗೂ ಸದಸ್ಯ ಸಂದೇಶ ಭಟ್ ಬೆಳಖಂಡ ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡಿ, ಲಸಿಕೆ ಒದಗಿಸಿಕೊಡುವಂಗೆ ವಿನಂತಿಸಿದ್ದರು. ಈ ಹಿನ್ನಲೆಯಲ್ಲಿ ಸಭಾಧ್ಯಕ್ಷರ ಸಹಕಾರದಿಂದ ತಾಲೂಕಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕುಳವೆ ಪಂಚಾಯತದಲ್ಲಿ ಲಸಿಕಾ ಅಭಿಯಾನ ನಡೆಸಲಾಯಿತು.

    300x250 AD

    ಲಸಿಕಾ ಅಭಿಯಾನದ ಆರಂಭದಲ್ಲಿ ಜಿಪಂ ಮಾಜಿ ಸದಸ್ಯೆ ಉಷಾ ಹೆಗಡೆ, ತಾಪಂ ಮಾಜಿ ಉಪಾಧ್ಯಕ್ಷ ಚಂದ್ರು ಎಸಳೆ, ಮಾಜಿ ಸದಸ್ಯ ನಾಗರಾಜ ಶೆಟ್ಟಿ ಹಾಗೂ ಯಡಳ್ಳಿ ಗ್ರಾಪಂ ಉಪಾಧ್ಯಕ್ಷ ರವೀಶ ಹೆಗಡೆ ಮಾಳೇನಳ್ಳಿ ಸ್ಥಳದಲ್ಲಿ ಹಾಜಾರಿದ್ದು, ಲಸಿಕೆಯ ಟೋಕನ್ ಗಳನ್ನು ವಿತರಿಸಿದರು.

    ಕುಳವೆ ಗ್ರಾಪಂ ಉಪಾಧ್ಯಕ್ಷೆ ಜ್ಯೋತಿ ನಾಯ್ಕ, ಸದಸ್ಯರಾದ ರಂಜಿತಾ ಹೆಗಡೆ ಶ್ರೀನಾಥ ಶೆಟ್ಟಿ ಹಾಗೂ ಉಂಚಳ್ಳಿ ಗ್ರಾಪಂ ಸದಸ್ಯ ರವಿತೇಜ ಅವರು ಲಸಿಕೆ ಅಭಿಯಾನ ವ್ಯವಸ್ಥಿತವಾಗಿ ನಡೆಯಲು ಕಾರಣೀಕರ್ತರಾದರು

    Share This
    300x250 AD
    300x250 AD
    300x250 AD
    Leaderboard Ad
    Back to top