
ಜಿಲ್ಲೆಯ ಕರೋನಾ ಪಾಸಿಟಿವಿಟಿ ದರದಲ್ಲಿ ಏರಿಳಿಕೆ ಆಗುತ್ತಿದ್ದು ಸೋಮವಾರ 41 ಮಂದಿಗೆ ಕರೋನಾ ಸೋಂಕು ದೃಢಪಟ್ಟಿದೆ.
ಜಿಲ್ಲಾ ಹೆಲ್ತ್ ಬುಲೆಟಿನ್ ಪ್ರಕಾರ ಕಾರವಾರದಲ್ಲಿ 6, ಅಂಕೋಲಾ 1, ಕುಮಟಾದಲ್ಲಿ 6, ಹೊನ್ನಾವರ 13, ಭಟ್ಕಳದಲ್ಲಿ 5, ಶಿರಸಿಯಲ್ಲಿ 6, ಯಲ್ಲಾಪುರದಲ್ಲಿ 4 ಕೇಸ್ ಪತ್ತೆಯಾಗಿದ್ದು ಹಳಿಯಾಳ , ಜೋಯಿಡಾ, ಸಿದ್ದಾಪುರ ಹಾಗೂ ಮುಂಡಗೋಡಿನಲ್ಲಿ ಯಾವುದೇ ಕೇಸ್ ಪತ್ತೆಯಾಗಿಲ್ಲ.
ಜಿಲ್ಲೆಯಲ್ಲಿ ಇಂದು ಕರೋನಾದಿಂದಾಗಿ ಎರಡು ಸಾವು ಸಂಭವಿಸಿದ್ದು ಕುಮಟಾದಲ್ಲಿ ಒಂದು ಹಾಗೂ ಶಿರಸಿಯಲ್ಲಿ ಒಬ್ಬರು ಕರೋನಾಕ್ಕೆ ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟೂ 411 ಪ್ರಕರಣಗಳು ಸಕ್ರಿಯವಾಗಿದ್ದು 50 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ 361ಸೋಂಕಿತರು ಹೋಂ ಐಸೋಲೇಷನ್ ನಲ್ಲಿದ್ದಾರೆ.
ಮತ್ತು ಜಿಲ್ಲೆಯಲ್ಲಿ ಇಂದು 67 ಜನ ಸೋಂಕಿನಿಂದ ಗುಣಮುಖರಾಗಿದ್ದು ಕಾರವಾರ 4, ಅಂಕೋಲಾ 28, ಕುಮಟಾ 8, ಹೊನ್ನಾವರ 9, ಭಟ್ಕಳಬ್6, ಶಿರಸಿ 1, ಯಲ್ಲಾಪುರ 5, ಮುಂಡಗೋಡದಲ್ಲಿ 6 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಜಿಲ್ಲೆಯ ಕರೋನಾ ಹೆಲ್ತ್ ಬುಲೆಟಿನ್ ಪ್ರಕಾರ ಹೊನ್ನಾವರದಲ್ಲಿ ಅತೀ ಹೆಚ್ಚು ಸೋಂಕು ಪತ್ತೆಯಾಗಿದ್ದು ಕುಮಟಾದಲ್ಲಿ ಎರಡನೇ ಅತಿಹೆಚ್ಚು ಸೋಂಕು ಪತ್ತೆಯಾಗಿದೆ.