
ಯಲ್ಲಾಪುರ: ತಾಲೂಕಿನ ಹಿತ್ಲಳ್ಳಿಯಲ್ಲಿ ನವಗ್ರಹ ಸಮಿಧವನ ನಿರ್ಮಾಣಕ್ಕೆ ಜ್ಯೋತಿಷ್ಯಾಚಾರ್ಯ ನಾಗೇಂದ್ರ ಭಟ್ ಚಾಲನೆ ನೀಡಿದರು.
ಸಂಸ್ಕಾರ ಶಿಕ್ಷಣ ಸೇವಾ ಪ್ರತಿಷ್ಠಾನ ಯಲ್ಲಾಪುರ ಹಾಗೂ ಪತಂಜಲಿ ಬಳಗ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ನವಗ್ರಹ ಸಮಿಧವನ ನಿರ್ಮಾಣ ಕಾರ್ಯಕ್ರಮದ ನೇತೃತ್ವ ವಹಿಸಿ ವಿಶೇಷ ಉಪನ್ಯಾಸ ನೀಡಿದ ಅವರು ವನಸ್ಪತಿಗಳನ್ನು ಬೆಳೆಸುವುದರಿಂದ ಚತುರ್ವಿಧ ಸಂಪತ್ತುಗಳಾದ ಆಯುಷ್ಯ, ಆರೋಗ್ಯ, ಆಹಾರ ಮತ್ತು ಆರ್ಥಿಕ ಸಂಪತ್ತುಗಳು ಸಿದ್ಧಿಸುತ್ತವೆ. ಭಾರತ ದೇಶದಾದ್ಯಂತ ವನಸ್ಪತಿ ನಿರ್ಮಾಣಕಾರ್ಯವು ಆಂದೋಲನ ರೂಪದಲ್ಲಿ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ತದನಂತರ ಸಂಗೀತ, ಮಂತ್ರ , ಮುದ್ರೆಗಳ ಸಂಯೋಜನೆಯ ಕುರಿತಾಗಿ ಮನರಂಜನಾ ಕಾರ್ಯಕ್ರಮ ನಡೆಯಿತು. ಮುದ್ರೆಗಳ ಮಹತ್ವದ ಕುರಿತಾಗಿ ಸುಭ್ರಾಯ ಭಟ್ಟ, ಮಂತ್ರ-ವೇದಗಳ ಕುರಿತಾಗಿ ರಾಮನಾಥ ಭಟ್ಟ ಹಾಗೂ ವಾಣಿ ರಮೇಶ ಮತ್ತು ವಿಭಾ ಹೆಗಡೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ತಬಲಾದಲ್ಲಿ ಗಣೇಶ ಗುಂಡ್ಕಲ್, ಸಂವಾದಿನಿಯಲ್ಲಿ ಸತೀಶ್ ಹೆಗ್ಗಾರ್ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಪತಂಜಲಿ ಬಳಗದ ಜಿಲ್ಲಾ ಸಂರಕ್ಷಕ ಜಿ.ಎನ್.ಹೆಗಡೆ, ಸೋಮೇಶ್ವರ ಶೇಟ್, ವಿ.ಕೆ.ಭಟ್ಟ, ಕಾರ್ಯದರ್ಶಿ ದಿವಾಕರ ಮರಾಠಿ, ವೈದ್ಯರಾದ ವಿಶ್ವನಾಥ ಶಿರಸಿ, ಮಂಜುನಾಥ್ ಶೇಟ್ ಇದ್ದರು.