
ಶಿರಸಿ: ಲಯನ್ಸ್ ಸಂಸ್ಥೆ ನಿರಂತರವಾಗಿ ಪರಿಸರ ರಕ್ಷಣೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದು, ಇನ್ನು ಮುಂದೂ ಸಹ ಅದು ನಡೆಯಲಿದ್ದು ಜೀವಜಲ ಹಾಗೂ ಪರಿಸರ ಸಂರಕ್ಷಣೆಗೆ ಸಂಸ್ಥೆ ಬದ್ಧವಾಗಿದೆ ಎಂದು ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಮ್ ಜೆ ಎಫ್ ಲ. ಉದಯ ಸ್ವಾದಿ ಹೇಳಿದರು.
ಅವರು ಆ.1 ರಂದು ಲಯನ್ಸ್ ಡಿಸ್ಟ್ರಿಕ್ಟ್ 317.ಬಿ ‘ಗೋ ಗ್ರೀನ್ ಕ್ಯಾಂಪೇನ್’ ಕಾರ್ಯಕ್ರಮದಡಿಯಲ್ಲಿ ಶಿರಸಿ ಲಯನ್ಸ್ ಬಳಗ ಆಯೋಜಿಸಿದ್ದ ವನಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದರು.
ಶಿರಸಿ ಲಯನ್ಸ್ ವತಿಯಿಂದ ಬರೂರು – ಕೆಂಚಗದ್ದೆಯ ಸುರಕ್ಷಿತ ಸ್ಥಳದಲ್ಲಿ ವಿವಿಧ ಜಾತಿಯ ನೂರಕ್ಕಿಂತ ಹೆಚ್ಚು ಸಸಿಗಳನ್ನು ನೆಡಲಾಯಿತು. ಶಿರಸಿ ಲಯನ್ಸ್ ಶಾಲೆ ಹಾಗೂ ಶ್ರೀನಿಕೇತನ ಶಾಲೆಯ ಲಿಯೋ ಕ್ಲಬ್ ನ ಮಕ್ಕಳ ಅತಿ ಉತ್ಸಾಹದಿಂದ ಭಾಗವಹಿಸಿ ಈ ಒಂದು ಪರಿಸರ ರಕ್ಷಣೆಯ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಲ. ಕೆ ಬಿ ಲೋಕೇಶ ಹೆಗಡೆ ಈ ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದ್ದರು. ಕಾರ್ಯಕ್ರಮದಲ್ಲಿ 40 ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು ಎಂದು ಶಿರಸಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ. ವಿನಯ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.