• Slide
  Slide
  Slide
  previous arrow
  next arrow
 • ವೈಟ್ ಬೋರ್ಡ್ ವಾಹನ ಬಾಡಿಗೆಗೆ ಬಳಸದಂತೆ ‘ಆರ್ ಟಿ ಓ’ ಗೆ ಮನವಿ

  300x250 AD

  ಶಿರಸಿ: ತಾಲೂಕಿನಲ್ಲಿ ವೈಟ್ ಬೋರ್ಡ್ ವಾಹನವನ್ನು ಬಾಡಿಗೆ ಹೊಡೆಯಲು ಬಳಸುತ್ತಿದ್ದು ಇದರಿಂದ ಯೆಲ್ಲೋ ಬೋರ್ಡ್ ವಾಹನ ಹೊಂದಿರುವವರಿಗೆ ತೊಂದರೆಯಾಗುತ್ತಿದೆ ಹಾಗೂ ಸರ್ಕಾರಕ್ಕೂ ತೆರಿಗೆ ನಷ್ಟವುಂಟಾಗುತ್ತಿದೆ. ಆದ್ದರಿಂದ ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ ಹೊಡೆಯದಂತೆ ತಡೆಗಟ್ಟಬೇಕೆಂದು ವೀರಕನ್ನಡಿಗ ಚಾಲಕರ ಸಂಘದಿಂದ ಆರ್ ಟಿ ಓ ರವರಿಗೆ ಮನವಿ ಸಲ್ಲಿಸಲಾಯಿತು.

  ವೈಟ್ ಬೋರ್ಡ್ ವಾಹನದಲ್ಲಿ ಅತಿ ಕಡಿಮೆ ದರದಲ್ಲಿ ಬಾಡಿಗೆ ಹೊಡೆಯುತ್ತಿದ್ದಾರೆ. ಇದರಿಂದ ಹಳದಿಬೋರ್ಡ್ ಹೊಂದಿರುವ ವಾಹನ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರಕ್ಕೆ ಟ್ಯಾಕ್ಸಿ ಪರ್ಮಿಟ್ ಹಾಗೂ ಕಮರ್ಶಿಯಲ್ ಇನ್ಶುರೆನ್ಸ್ ತುಂಬಲೂ ಹಣವಿಲ್ಲದಂತಾಗಿ  ಜೀವನ ನಡೆಸಲೂ ಅವರಿಂದ ಸಾಧ್ಯವಾಗುತ್ತಿಲ್ಲ. ಅಲ್ಲದೇ ಸರ್ಕಾರಕ್ಕೂ ತೆರಿಗೆ ನಷ್ಟವಾಗುತ್ತಿದೆ ಹಾಗೂ ವೈಟ್ ಬೋರ್ಡ್ ವಾಹನದಲ್ಲಿ ಪ್ರಯಾಣಿಸುವವರಿಗೆ ಯಾವುದೇ ಇನ್ಶುರೆನ್ಸ್ ಕೂಡ ದೊರೆಯುವುದಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ವೈಟ್ ಬೋರ್ಡ್ ವಾಹನದಲ್ಲಿ ಪ್ರಯಾಣ ಸುರಕ್ಷಿತವಲ್ಲ‌. ಹಾಗಾಗಿ ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ ಹೊಡೆಯುವುದನ್ನು ನಿಲ್ಲಿಸಬೇಕು. ಈ ಕುರಿತಾಗಿ ಹಿಂದೆಯೂ ಅನೇಕ ಬಾರಿ ಮನವಿ ನೀಡಲಾಗಿದೆ ಆದರೆ ಯಾರೂ ಕೂಡ ಗಮನ ಹರಿಸಿಲ್ಲ,  ಈ ಹಿನ್ನೆಲೆಯಲ್ಲಿ ತಕ್ಷಣವೇ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಮನವಿ ನೀಡಲಾಗಿದೆ.

  ಮನವಿ ಸ್ವೀಕರಿಸಿದ ಆರ್ ಟಿ ಓ ಸಿ.ಡಿ ನಾಯ್ಕ ಹಾಗೂ ಡಿವೈಎಸ್ಪಿ  ರವಿ ಡಿ ನಾಯ್ಕ ಕ್ರಮ ವಹಿಸುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಂಘದ  ಜಿಲ್ಲಾಧ್ಯಕ್ಷ ಸಚಿನ್ ಎಸ್ ಕೋಡ್ಕಣಿ, ಕಾರ್ಯದರ್ಶಿ ಶಂಕರ ಮಡಗಾಂವಕರ್, ಸದಸ್ಯರಾದ ರಾಘವೇಂದ್ರ ನಾಯ್ಕ, ಮಂಜುನಾಥ ಲಮಾಣಿ, ವಿಶ್ವನಾಥ ಆಚಾರಿ ಮುಂತಾದವರು ಇದ್ದರು.

  300x250 AD

  ತಾಲೂಕಿನಲ್ಲಿ ವೈಟ್ ಬೋರ್ಡ್ ವಾಹನವನ್ನು ಬಾಡಿಗೆ ಹೊಡೆಯಲು ಬಳಸುತ್ತಿದ್ದು ಇದರಿಂದ ಯೆಲ್ಲೋ ಬೋರ್ಡ್ ವಾಹನ ಹೊಂದಿರುವವರಿಗೆ ತೊಂದರೆಯಾಗುತ್ತಿದೆ ಹಾಗೂ ಸರ್ಕಾರಕ್ಕೂ ತೆರಿಗೆ ನಷ್ಟವುಂಟಾಗುತ್ತಿದೆ. ಆದ್ದರಿಂದ ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ ಹೊಡೆಯದಂತೆ ತಡೆಗಟ್ಟಬೇಕೆಂದು ವೀರಕನ್ನಡಿಗ ಚಾಲಕರ ಸಂಘದಿಂದ ಆರ್ ಟಿ ಓ ರವರಿಗೆ ಮನವಿ ಸಲ್ಲಿಸಲಾಯಿತು.

  ವೈಟ್ ಬೋರ್ಡ್ ವಾಹನದಲ್ಲಿ ಅತಿ ಕಡಿಮೆ ದರದಲ್ಲಿ ಬಾಡಿಗೆ ಹೊಡೆಯುತ್ತಿದ್ದಾರೆ. ಇದರಿಂದ ಹಳದಿಬೋರ್ಡ್ ಹೊಂದಿರುವ ವಾಹನ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರಕ್ಕೆ ಟ್ಯಾಕ್ಸಿ ಪರ್ಮಿಟ್ ಹಾಗೂ ಕಮರ್ಶಿಯಲ್ ಇನ್ಶುರೆನ್ಸ್ ತುಂಬಲೂ ಹಣವಿಲ್ಲದಂತಾಗಿ  ಜೀವನ ನಡೆಸಲೂ ಅವರಿಂದ ಸಾಧ್ಯವಾಗುತ್ತಿಲ್ಲ. ಅಲ್ಲದೇ ಸರ್ಕಾರಕ್ಕೂ ತೆರಿಗೆ ನಷ್ಟವಾಗುತ್ತಿದೆ ಹಾಗೂ ವೈಟ್ ಬೋರ್ಡ್ ವಾಹನದಲ್ಲಿ ಪ್ರಯಾಣಿಸುವವರಿಗೆ ಯಾವುದೇ ಇನ್ಶುರೆನ್ಸ್ ಕೂಡ ದೊರೆಯುವುದಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ವೈಟ್ ಬೋರ್ಡ್ ವಾಹನದಲ್ಲಿ ಪ್ರಯಾಣ ಸುರಕ್ಷಿತವಲ್ಲ‌. ಹಾಗಾಗಿ ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ ಹೊಡೆಯುವುದನ್ನು ನಿಲ್ಲಿಸಬೇಕು. ಈ ಕುರಿತಾಗಿ ಹಿಂದೆಯೂ ಅನೇಕ ಬಾರಿ ಮನವಿ ನೀಡಲಾಗಿದೆ ಆದರೆ ಯಾರೂ ಕೂಡ ಗಮನ ಹರಿಸಿಲ್ಲ,  ಈ ಹಿನ್ನೆಲೆಯಲ್ಲಿ ತಕ್ಷಣವೇ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಮನವಿ ನೀಡಲಾಗಿದೆ.

  ಮನವಿ ಸ್ವೀಕರಿಸಿದ ಆರ್ ಟಿ ಓ ಸಿ.ಡಿ ನಾಯ್ಕ ಹಾಗೂ ಡಿವೈಎಸ್ಪಿ  ರವಿ ಡಿ ನಾಯ್ಕ ಕ್ರಮ ವಹಿಸುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಂಘದ  ಜಿಲ್ಲಾಧ್ಯಕ್ಷ ಸಚಿನ್ ಎಸ್ ಕೋಡ್ಕಣಿ, ಕಾರ್ಯದರ್ಶಿ ಶಂಕರ ಮಡಗಾಂವಕರ್, ಸದಸ್ಯರಾದ ರಾಘವೇಂದ್ರ ನಾಯ್ಕ, ಮಂಜುನಾಥ ಲಮಾಣಿ, ವಿಶ್ವನಾಥ ಆಚಾರಿ ಮುಂತಾದವರು ಇದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top