• first
  second
  third
  previous arrow
  next arrow
 • ಆ.11 ಕ್ಕೆ ಬಾಳೆಕಾಯಿ ಹುಡಿಯ ಖಾದ್ಯ ವೈವಿಧ್ಯ ಸ್ಪರ್ಧೆ, ಕಾರ್ಯಾಗಾರ

  300x250 AD

  ಶಿರಸಿ: ಬಾಳೆಕಾಯಿ ಹುಡಿಯ ಖಾದ್ಯ ವೈವಿಧ್ಯ ಸ್ಪರ್ಧೆ ಹಾಗೂ ಕಾರ್ಯಾಗಾರವನ್ನು ಆ.11 ರಂದು ಶಿರಸಿ ಎಪಿಎಂಸಿ ಯಾರ್ಡ್ ನ ಟಿ ಆರ್ ಸಿ ಸಭಾಭವನದಲ್ಲಿ  ಏರ್ಪಡಿಸಲಾಗಿದೆ.

  ಕೃಷಿ ವಿಜ್ಞಾನ ಕೇಂದ್ರ ಶಿರಸಿ, ಉತ್ತರಕನ್ನಡ ಸಾವಯವ ಒಕ್ಕೂಟ ಶಿರಸಿ ಹಾಗೂ ತೋಟಗಾರಿಕಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ‘ಬೊಂಬಾಟ್ ಭೋಜನ’ ಖ್ಯಾತಿಯ ‘ಸಿಹಿಕಹಿ ಚಂದ್ರು’ ಉಪಸ್ಥಿತರಿರುತ್ತಾರೆ.

  ಅಂದು ಬೆಳಿಗ್ಗೆ 10.30 ರಿಂದ 12 ಗಂಟೆಯ ವರೆಗೆ ಸ್ಪರ್ಧೆ ನಡೆಯಲಿದ್ದು, ತದನಂತರ ಬಾಳೆಕಾಯಿ ಹುಡಿಯ ಮೌಲ್ಯವರ್ಧನೆಯ ಕುರಿತು ಕಾರ್ಯಾಗಾರ ನಡೆಯಲಿದೆ.

  300x250 AD

  ಸ್ಪರ್ಧೆಯ ನಿಯಮಗಳು ಹೀಗಿವೆ :-
  • ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಳೆಕಾಯಿ ಹುಡಿಯ ಬಳಕೆ ಯಾಗಿರಬೇಕು.
  • ಮನೆಯಿಂದಲೇ ತಿನಿಸುಗಳನ್ನು ತಯಾರಿಸಿ ತರಬೇಕು.
  • ತಿನಿಸುಗಳು ಕನಿಷ್ಟ ಒಂದು ವಾರಗಳ ಬಾಳಿಕೆ ಹೊಂದಿರಬೇಕು.
  • ಒಬ್ಬರು ಒಂದು ಖಾರ ಹಾಗೂ ಒಂದು ಸಿಹಿ ತಿಂಡಿಯನ್ನು ಸ್ಪರ್ಧೆಗೆ ಇಡಬಹುದು.
  • ತಿಂಡಿಗಳನ್ನು ಪ್ರದರ್ಶನಕ್ಕಾಗಿ ಹಾಗೂ ರುಚಿಗಾಗಿ ಪ್ರತ್ಯೇಕವಾಗಿ ಕಾಯ್ದಿರಿಸಬೇಕು.
  • ಹೆಚ್ಚುದಿನ ಬಾಳಿಕೆ ಬರುವಂತ ಹಾಗೂ ದಿನಬಳಕೆಗೆ ಉತ್ತಮವಾಗುವ ರುಚಿಯಾದ ತಿಂಡಿಗೆ ಮೊದಲ ಪ್ರಾಶಸ್ತ್ಯ.
  • ಭಾಗವಹಿಸಲು ಇಚ್ಛಿಸುವವರು ಆ. 8 ರ ಒಳಗೆ ಹೆಸರು ನೊಂದಾಯಿಸಬೇಕು.

  ಹೆಚ್ಚಿನ ಮಾಹಿತಿಗಾಗಿ ಅಜಯಭಟ್ – 7022897751 , ವಿಕಾಸ ಹೆಗಡೆ – 8277227228 / 9110401920 , ಕೆ.ವಿ.ಗಣೇಶ – 7022330666 ಸಂಪರ್ಕಿಸಲು ಕೋರಿದೆ.

  Share This
  300x250 AD
  300x250 AD
  300x250 AD
  Back to top