
ಹೊನ್ನಾವರ: ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂದು ಶರಾವತಿಗೆ ನದಿಗೆ ಬಾಗಿನ ಅರ್ಪಿಸಿ, ಗೇಟ್ ಮೂಲಕ ಸಾಂಪ್ರದಾಯಿಕವಾಗಿ ನೀರು ಹೊರಗೆ ಬಿಡಲಾಯಿತು.
ಬೆಳಗ್ಗೆ ಕೆಪಿಸಿ ಅಧಿಕಾರಿಗಳು ಶರಾವತಿ ನದಿಗೆ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಣೆ ಮಾಡಿದರು. ಕೆಪಿಸಿ ಅಧಿಕಾರಿಗಳು, ಅವರ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಗೇಟ್ ನಿಂದ ನೀರು ಹೊರಗೆ: ಲಿಂಗನಮಕ್ಕಿ ಜಲಾಶಯದ ಗೇಟ್ ನಿಂದ ಇವತ್ತು ಸಾಂಪ್ರದಾಯಿಕವಾಗಿ ಕೆಲವು ನಿಮಿಷ ನೀರು ಹೊರಗೆ ಬಿಡಲಾಯಿತು. ಜಲಾಶಯ ಅರ್ಧ ಭರ್ತಿಯಾದ ಬಳಿಕ ಒಂದು ಗೇಟ್ ಮೂಲಕ ಸ್ವಲ್ಪ ಪ್ರಮಾಣದ ನೀರನ್ನು ಹೊರಗೆ ಹರಿಸಲಾಯಿತು.