• first
    second
    third
    previous arrow
    next arrow
  • Trending Now

    ಕೊರೊನಾ ಪಾಸಿಟಿವಿಟಿ ದರ ಏರಿಕೆ; ರಾಜ್ಯದಲ್ಲಿ ಕಠಿಣ ಕ್ರಮಕ್ಕೆ ಕೇಂದ್ರ ಸೂಚನೆ

    300x250 AD

    ನವದೆಹಲಿ: ದೇಶದ ಸುಮಾರು 10 ರಾಜ್ಯಗಳಲ್ಲಿ ಕೊರೋನಾ ಪಾಸಿಟಿವಿಟಿ ದರ 10% ಗಳಿದ್ದು, ಈ ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧ ಅಗತ್ಯ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
    ಜನರ ಓಡಾಟ, ಜನಸಂದಣಿ ಸೇರುವುದನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವಾಲಯ ಸೂಚಿಸಿದೆ. ದೇಶದ 46 ಜಿಲ್ಲೆಗಳಲ್ಲಿ 10% ಗಿಂತ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ಸುಮಾರು 53% ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ದರ 5% ದಿಂದ 10% ವರೆಗಿದೆ. ಈ ಹಂತದಲ್ಲಿ ನಿರ್ಬಂಧ ಹೇರದಿದ್ದರೆ ಪರಿಸ್ಥಿತಿ ಹದೆಗೆಡುವ ಸಾಧ್ಯತೆ ಇದೆ ಎಂದು ಸಚಿವಾಲಯ ಹೇಳಿದೆ.
    ಕೇರಳ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಒಡಿಶಾ, ಅಸ್ಸಾಂ, ಮೀಜೋರಂ, ಆಂಧ್ರಪ್ರದೇಶ ,ಮೇಘಾಲಯ, ಮಣಿಪುರಗಳಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ನಿಯಂತ್ರಣ ಕ್ರಮಗಳನ್ನು, ಕಣ್ಗಾವಲು ಅಗತ್ಯ. ನಿಯಂತ್ರಣ, ನಿರ್ವಹಣೆಯ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವಾಲಯ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top