
ಶಿರಸಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಶಿರಸಿಯಲ್ಲಿ ತನ್ನ ತಾಲೂಕಾ ಘಟಕವನ್ನು ಆರಂಭಿಸಲಿದ್ದು, ರಾಜ್ಯ ಮಟ್ಟದ ಈ ಸಂಘಟನೆಯ ಮಾರ್ಗದರ್ಶಕ ಮಂಡಳಿಯ ನಿರ್ದೇಶಕ, ಉತ್ತರ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರೊ. ಜಿ. ಎ. ಹೆಗಡೆ ಸೋಂದಾ ಕೇಂದ್ರ ಸಮಿತಿ ನೀಡಿದ ಅಧಿಕಾರ ಬಳಸಿ ತಾಲೂಕಾ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ.
ಅಧ್ಯಕ್ಷರಾಗಿ ಮಂಜುನಾಥ ಹೆಗಡೆ, ಹೂಡ್ಲಮನೆ, ಪಿ.ಎನ್ ನಾಗೇಂದ್ರ ಶಿರಸಿ ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಪಿ.ಸಿ. ದಾಕ್ಷಾಯಿಣಿ ಶಿರಸಿ ಅವರನ್ನು ನೇಮಕ ಮಾಡಲಾಗಿದೆ.
ತಾಲೂಕಾ ಘಟಕ ತನ್ನ ಸಾಹಿತ್ಯಿಕ ಕಾರ್ಯಯೋಜನೆಗಳನ್ನು ನಿರ್ವಹಿಸಲು ತಾಲೂಕಾ ಘಟಕಕ್ಕೆ ಮಾರ್ಗದರ್ಶಕ ಮಂಡಳಿಯನ್ನು ನಿಯುಕ್ತಿಗೊಳಿಸಿದ್ದು, ಹಿರಿಯ ಸಾಹಿತಿಗಳಾದ ಮನೋಹರ ಮಲ್ಮನೆ, ಅಶೋಕ ಹಾಸ್ಯಗಾರ, ಡಿ.ಎಸ್. ನಾಯ್ಕ, ಕೆ.ಹೆಚ್.ಬಿ ಕಾಲೋನಿ, ಮಹಾಬಲೇಶ್ವರ ಭಟ್ಟ ನಡುಗೋಡ, ಎಸ್. ಎಸ್. ಭಟ್ಟ ಕೆ.ಹೆಚ್.ಬಿ. ಕಾಲೋನಿ. ಪ್ರೊ. ಡಿ.ಎಂ ಭಟ್ಟ ಕುಳವೆ, ಜಿ.ವಿ. ಕೊಪ್ಪತೋಟ, ದತ್ತಗುರು ಕಂಟಿ, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಡಾ.ಜಿ. ಎ. ಹೆಗಡೆ ಸೋಂದಾ ತಿಳಿಸಿದ್ದಾರೆ.