
ನವದೆಹಲಿ: ಜುಲೈ 2021ರಲ್ಲಿ ಒಟ್ಟು ಜಿಎಸ್ಟಿ ಆದಾಯ ಸಂಗ್ರಹ 1,16,393 ಕೋಟಿ ರೂ ಆಗಿದ್ದು, ಆ ಪೈಕಿ ಸಿಜಿಎಸ್ ಟಿ 22,197 ಕೋಟಿ ರೂ, ಎಸ್ ಜಿಎಸ್ ಟಿ 28,541 ಕೋಟಿ ರೂ, ಐಜಿಎಸ್ ಟಿ 57,864 ಕೋಟಿ ರೂ. (ಇದರಲ್ಲಿ 27,900 ಕೋಟಿ ರೂ. ಆಮದು ವಸ್ತುಗಳ ಆಮದಿನಿಂದ ಸಂಗ್ರಹವಾಗಿದೆ) ಮತ್ತು 7,790 ಕೋಟಿ ರೂ. ಸೆಸ್ ಆಗಿದ್ದು, (ಇದರಲ್ಲಿ 815 ಕೋಟಿ ವಸ್ತುಗಳ ಆಮದಿನಿಂದ ಸಂಗ್ರಹವಾಗಿದೆ). ಈ ಮೇಲಿನ ಅಂಕಿ ಅಂಶಗಳಲ್ಲಿ 2021ರ ಜುಲೈ 1ರಿಂದ ಜು.31ರವರೆಗೆ ಫೈಲ್ ಆಗಿರುವ ಜಿಎಸ್ಟಿಆರ್-3 ಬಿ ಮತ್ತು ಐಜಿಎಸ್ಟಿ ಮತ್ತು ಇದೇ ಅವಧಿಯಲ್ಲಿ ಆಮದು ವಸ್ತುಗಳಿಂದ ಸಂಗ್ರಹವಾದ ಸೆಸ್ ಸಹ ಸೇರಿದೆ.
2021ರ ಜುಲೈ 1 ರಿಂದ 5ರವರೆಗೆ ಜಿಎಸ್ಟಿ ರಿಟರ್ನ್ 4,937 ಕೋಟಿ ರೂ, ಸಂಗ್ರಹವಾಗಿದೆ. ಅದರಲ್ಲಿ ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆ ಹಿನ್ನೆಲೆಯಲ್ಲಿ ಸರಾಸರಿ ವಹಿವಾಟು 5 ಕೋಟಿ ವರೆಗೆ ಹೊಂದಿರುವ ತೆರಿಗೆ ಪಾವತಿದಾರರಿಗೆ ಜೂನ್ ತಿಂಗಳ 21ರವರೆಗೆ 15 ದಿನಗಳಲ್ಲಿ ವಿಳಂಬವಾಗಿ ಪಾವತಿ ಮಾಡಿದರೂ ಸಹ ಬಡ್ಡಿ ಮನ್ನಾ/ವಿನಾಯ್ತಿ ಸೇರಿ ಹಲವು ಪರಿಹಾರ ಕ್ರಮಗಳನ್ನು ತೆರಿಗೆಪಾವತಿದಾರರಿಗೆ ಪ್ರಕಟಿಸಲಾಗಿತ್ತು.
ಸರ್ಕಾರ ಮಾಮೂಲಿನಂತೆ 28,087 ಕೋಟಿ ಸಿಜಿಎಸ್ ಟಿ ಮತ್ತು 24,100 ಕೋಟಿ ಎಸ್ಜಿಎಸ್ಟಿ ಮೊತ್ತವನ್ನು ಪಾವತಿಸಿದೆ. ಜುಲೈ 2021ರಲ್ಲಿ ಕೇಂದ್ರ ಮತ್ತು ರಾಜ್ಯಗಳು ನಿಗದಿತ ಪಾವತಿಗಳ ನಂತರ 50,284 ಕೋಟಿ ಸಿಜಿಎಸ್ ಟಿ ಮತ್ತು 52,641 ಕೋಟಿ ಎಸ್ ಜಿಎಸ್ಟಿ ಯನ್ನು ಸಂಗ್ರಹ ಮಾಡಿದೆ.
2021ರ ಜುಲೈನಲ್ಲಿ ಸಂಗ್ರಹಿಸಿರುವ ಜಿಎಸ್ಟಿ ಆದಾಯ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.33ರಷ್ಟು ಅಧಿಕವಾಗಿದೆ. ತಿಂಗಳ ಅವಧಿಯಲ್ಲಿ ಸರಕುಗಳ ಆಮದಿನ ಆದಾಯವು ಶೇ. 36ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನ ಆದಾಯ (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಲ್ಲಿ ಬಂದ ಆದಾಯಕ್ಕಿಂತ ಶೇ.32ರಷ್ಟು ಹೆಚ್ಚಾಗಿದೆ.
ಜಿಎಸ್ಟಿ ಸಂಗ್ರಹ ಸತತ 8 ತಿಂಗಳು 1 ಲಕ್ಷ ಕೋಟಿಗೂ ಅಧಿಕ ಮುಂದುವರಿದಿದೆ, ಆದರೆ ಜೂನ್ 2021ರಲ್ಲಿ 1 ಲಕ್ಷಕ್ಕಿಂತ ಕೆಳಗೆ ಕುಸಿದಿತ್ತು, ಜೂನ್ ತಿಂಗಳಲ್ಲಿ ಸಂಗ್ರಹವಾಗಿದ್ದ ಮೊತ್ತ ಬಹುತೇಕ 2021ರ ಮೇ ತಿಂಗಳಿಗೆ ಸೇರಿದ್ದು, ಏಕೆಂದರೆ ಕೋವಿಡ್ ಕಾರಣದಿಂದಾಗಿ ಬಹುತೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದಲ್ಲಿ ಸಂಪೂರ್ಣ ಅಥವಾ ಭಾಗಶಃ ಲಾಕ್ ಡೌನ್ ವಿಧಿಸಿರುವುದು ಕಾರಣವಾಗಿತ್ತು.
ಕೋವಿಡ್ ನಿರ್ಬಂಧಗಳ ಸಡಿಲಿಕೆ ಪರಿಣಾಮ, ಜಿಎಸ್ಟಿ ಸಂಗ್ರಹ 2021ರ ಜುಲೈನಲ್ಲಿ ಮತ್ತೆ 1 ಲಕ್ಷ ಕೋಟಿ ರೂ.ಗೂ ಮೇಲೇರಿದೆ, ಇದು ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ಸಂಕೇತವಾಗಿದೆ. ಮುಂದಿನ ತಿಂಗಳುಗಳಲ್ಲಿಯೂ ಸಹ ಜಿಎಸ್ಟಿ ಸಂಗ್ರಹ ಉತ್ತಮ ರೀತಿಯಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ.