• Slide
    Slide
    Slide
    previous arrow
    next arrow
  • ‘ಮಹಾಲಕ್ಷ್ಮೀ ಮೆಮೋರಿಯಲ್’ ಆಸ್ಪತ್ರೆಯಲ್ಲಿ ‘ಕೋವಿಶೀಲ್ಡ್ ಲಸಿಕೆ’ ಲಭ್ಯ

    300x250 AD

    ಶಿರಸಿ: ನಗರದ ಮಹಾಲಕ್ಷ್ಮೀ ಮೆಮೋರಿಯಲ್‌ ಆಸ್ಪತ್ರೆಯಲ್ಲಿ ಜು.31ರಿಂದ ಪ್ರತಿದಿನ ‘ಕೋವೀಶೀಲ್ಡ್’ ಲಸಿಕೆ ಲಭ್ಯವಿದ್ದು ಮೊದಲ ಹಾಗೂ ಎರಡನೇ ಡೋಸ್ ಪಡೆಯುವರಿಗೆ ಲಸಿಕೆ ನೀಡಲಾಗುತ್ತದೆ.

    ಲಸಿಕೆ ಪಡೆಯಲು ಇಚ್ಛಿಸುವವರು ಬೆಳಿಗ್ಗೆ 10 ರಿಂದ 12 ಗಂಟೆ ಹಾಗೂ ಸಂಜೆ 4 ರಿಂದ 6 ಗಂಟೆ ಸಮಯದಲ್ಲಿ ಆಸ್ಪತ್ರೆಗೆ ಭೇಟಿ ನೀಡಬಹುದಾಗಿದ್ದು 1ನೇ ಡೋಸ್ ಪಡೆಯುವವರು ಲಸಿಕೆ ಪಡೆಯಲು ಬರುವಾಗ ‘Cowin’ ಆಪ್ ನಲ್ಲಿ ಖುದ್ದಾಗಿ ನೊಂದಾಯಿಸಿಕೊಂಡು 4 ಅಂಕೆಯ ಸಿಕ್ರೇಟ್ ಕೋಡ್ ತರಬೇಕು ಅಥವಾ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಆಸ್ಪತ್ರೆಯಲ್ಲಿಯೇ  ನೋಂದಾಯಿಸಿಕೊಳ್ಳಬಹುದಾಗಿದೆ.

    2 ನೇ ಡೋಸ್ ಪಡೆಯಲು ಬರುವವರು ಈ ಹಿಂದೆ ನೋಂದಾಯಿಸಿದ ಮೊಬೈಲ್ ಸಂಖ್ಯೆಯನ್ನೇ ತರಬೇಕು. ಮೊದಲನೇ ಡೋಸ್ ನೀಡಿದ 84 ದಿನಗಳ ನಂತರವೇ ಎರಡನೇ ಡೋಸ್ ನೀಡಲಾಗುತ್ತದೆ. ಲಸಿಕೆ ಪಡೆಯಲು ಸರ್ಕಾರದ ನಿರ್ಧರಿತ ಶುಲ್ಕ 780 ರೂ. ಪಾವತಿಸಬೇಕು ಎಂದು ಆಸ್ಪತ್ರೆಯ ಡಾ.ದಿನೇಶ ಹೆಗಡೆ ಹಾಗೂ ಡಾ.ಸುಮನ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD

    ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ಭೇಟಿ ಸಮಯ ಕಾಯ್ದಿರಿಸಿಕೊಳ್ಳಲು 08384225341 ಮತ್ತು 9243367888. ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top