• first
  second
  third
  previous arrow
  next arrow
 • ದೇಶಪಾಂಡೆ ನೇತೃತ್ವದಲ್ಲಿ ಕಾಂಗ್ರೆಸ್’ನಿಂದ ನೆರೆ ಸಂತ್ರಸ್ತರಿಗೆ ಸಾಂತ್ವನ

  300x250 AD

  ಕುಮಟಾ: ಕರ್ನಾಟಕ ಕಾಂಗ್ರೆಸ್ ನೆರೆ – ಪ್ರವಾಹ – ನಷ್ಟ  ಅಧ್ಯಯನ ಸಮಿತಿ ಮುಖ್ಯಸ್ಥ ಮಾಜಿ ಸಚಿವ ಆರ್ ವಿ ದೇಶಪಾಂಡೆ ನೇತೃತ್ವದಲ್ಲಿ ಭಾನುವಾರ ಅತಿವೃಷ್ಟಿಯಿಂದ ಹಾನಿಗೊಳಗಾದ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಲಾಯಿತು.

  ಶಿರಸಿ ತಾಲೂಕಿನ ಕೃಷಿ ಪ್ರದೇಶ, ತೋಟಗಳು, ಕೊಚ್ಚಿಹೋದ ಗುಬ್ಬಿಗದ್ದೆ ಪಾಂಡವರ ಹೊಳೆ ತೂಗು ಸೇತುವೆ ವೀಕ್ಷಿಸಿದರು. ಮಳೆಯ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಹುಸರಿಯ ಯುವಕ ಗಂಗಾಧರ ತಿಮ್ಮ ಗೌಡರ ಮನೆಗೆ ತೆರಳಿ ಸಾಂತ್ವನ ಹೇಳಲಾಯಿತು.

  ಸಿದ್ದಾಪುರ ತಾಲೂಕಿನ ಕಿಲಾರ, ಮುಟ್ಠಳ್ಳಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು.

  300x250 AD

  ಕುಮಟಾ ತಾಲೂಕಿನ ನಾಡುಮಾಸ್ಕೇರಿ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಆಶ್ರಯ ಪಡೆದಿರುವ ಕುಟುಂಬಗಳಿಗೆ ಸಮಾಧಾನ ಹೇಳಿ ಸಹಾಯ ಒದಗಿಸುವ ಭರವಸೆ ನೀಡಿ ಸರಕಾರದ ವತಿಯಿಂದ ದೊರಕುವ ಪರಿಹಾರಕ್ಕಾಗಿ ಪ್ರಯತ್ನವನ್ನು ಮಾಡುವುದಾಗಿ ತಿಳಿಸಲಾಯಿತು.

  ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುಮಾ ಉಗ್ರಾಣಕರ್, ಬ್ಲಾಕ್ ಆಧ್ಯಕ್ಷ ವಸಂತ ನಾಯ್ಕ, ವಿವಿಧ ವಿಭಾಗಗಳ ಅಧ್ಯಕ್ಷರಾದ ಆರ್ ಎಮ್ ಹೆಗಡೆ, ದೀಪಕ ಹೆಗಡೆ, ನಾಗರಾಜ ನಾರ್ವೇಕರ್, ಮಾಜಿ ಶಾಸಕರು, ಪದಾಧಿಕಾರಿಗಳು ,ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top