
ಯಲ್ಲಾಪುರ: ಮಳೆಯಿಂದ ಜಿಲ್ಲೆಗಾದ ಹಾನಿಯನ್ನುವೀಲ್ಷಿಸಲು ಸೋಮವಾರ ಕಾರವಾರಕ್ಕೆ ಆಗಮಿಸಲಿರುವ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭಾನುವಾರ ಪಟ್ಟಣದಲ್ಲಿ ಸ್ವಾಗತಿಸಲಾಯಿತು.
ಭಾನುವಾರ ಸಂಜೆ ಪಟ್ಟಣಕ್ಕೆ ಆಗಮಿಸಿದ ಸಿದ್ದರಾಮಯನವರನ್ನು ಇಲ್ಲಿಯ ಸಂಭ್ರಮ ಹೊಟೆಲ್ ಬಳಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿ, ಹೂಗುಚ್ಛ ನೀಡುವುದರ ಮೂಲಕ ಸ್ವಾಗತಿಸಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಿಮಣ್ಣ ನಾಯ್ಕ, ಧುರೀಣ ಪ್ರಶಾಂತ ದೇಶಪಾಂಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ ಎನ್ ಗಾಂವ್ಕರ್, ಪ್ರಶಾಂತ ಸಭಾಹಿತ, ಅನೀಲ ಮರಾಠೆ ಸೇರಿದಂತೆ ಇನ್ನಿತರರು ಇದ್ದರು.