
ಯಲ್ಲಾಪುರ: ತಾಲೂಕಿನ ಕಳಚೆ ಭಾಗದಲ್ಲಿ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಮಾತೃಭೂಮಿ ಸೇವಾ ಪ್ರತಿಷ್ಠಾನದ ವತಿಯಿಂದ 7 ಲಕ್ಷರೂ. ಪರಿಹಾರ ವಿತರಿಸಲಾಯಿತು.
ಕುರಿತು ಫಲಾನುಭವಿಗಳ ಯಾದಿ ಬಿಡುಗಡೆಗೊಳಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಶ್ರೀರಂಗ ಕಟ್ಟಿ ಸಂಸ್ಥೆಯ ವತಿಯಿಂದ ಕಳಚೆ ಪ್ರದೇಶಕ್ಕೆ ಭೇಟಿ ನೀಡಿ ಐವತ್ತು ಜನರ ಖಾತೆಗೆ ಒಟ್ಟೂ ಐದು ಲಕ್ಷರೂ ವಿತರಿಸಲಾಗುವುದು. ಉಂಟಾದ ಹಾನಿ ಹಾಗೂ ಅವರ ಆರ್ಥಿಕ ಪರಿಸ್ಥಿತಿಯ ಆಧಾರದ ಪ್ರತಿಯೊಬ್ಬರಿಗೂ ಮೇಲೆ ಐದು ಸಾವಿರದಿಂದ ಇಪ್ಪತ್ತೈದು ಸಾವಿರದ ವರೆಗೆ ಪರಿಹಾರ ನೀಡಲಾಗಿದೆ ಎಂದರು.
ಇದರ ಜೊತೆಗೆ ಸಂಸ್ಥೆಯ ವತಿಯಿಂದ ಕಳಚೆ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ 1ಲಕ್ಷ ಮೌಲ್ಯದ ಪೈಪು ಮುಂತಾದ ಸಾಮಗ್ರಿಗಳು ಹಾಗೂ ಕಳಚೆ ಪ್ರದೇಶದ ಮಕ್ಕಳ ಶೈಕ್ಷಣಿಕ ವೆಚ್ಚಕ್ಕಾಗಿ ಒಂದು ಲಕ್ಷರೂ. ನೀಡಲಾಗುವುದು. ಈಮೂಲಕ ಕಳಚೆಯ ಜನರಿಗೆ ನೈತಿಕ ಬೆಂಬಲ ನೀಡಿ ಅವರು ಪುನಃ ಬದುಕು ಕಟ್ಟಿಕೊಳ್ಳಲು ಸಂಸ್ಥೆಯವತಿಯಿಂದ ಸಹಾಯ ಮಾಡಲಾಗುವುದು ಎಂದು ಅವರು ಅಭಿಪ್ರಾಯಪಟ್ಟರು.
ಟ್ರಸ್ಟಿಯಾದ ಜನಾರ್ಧನ ಹೆಬ್ಬಾರ್ ಮಾತನಾಡಿ ಸಂಸ್ಥೆಗ ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿ ಅದರಿಂದ ಬರುವ ಬಡ್ಡಿ ಹಣದಿಂದ ಕಳಚೆ ಪ್ರದೇಶದ ಏಳನೇ ಹಾಗೂ ಹತ್ತನೇ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ ಘೋಷಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಗುಡ್ ಕ್ವೆಸ್ಟ್ ಸಂಸ್ಥೆಯವತಿಯಿಂದ ಜನರಿಗೆ ಸೋಲಾರ್ ಲ್ಯಾಂಪ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಪ್ರೇಮಾನಂದ ನಾಯ್ಕ, ಗಣೇಶ ಭಾಗ್ವತ್ ತೇಲಂಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.