
ಶಿರಸಿ: ಕೊರೊನಾ ತಡೆಗಾಗಿ ಸರ್ಕಾರ ಉಚಿತ ವ್ಯಾಕ್ಸಿನ್ ನೀಡುತ್ತಿದ್ದು, ಹಲವೆಡೆ ಅಭಿಯಾನ ನಡೆಸಿ ವ್ಯಾಕ್ಸಿನ್ ನೀಡುತ್ತಿದ್ದಾರೆ. ಆ.2, ಸೋಮವಾರ ಶಿರಸಿ ತಾಲೂಕಿನಲ್ಲಿ ಒಟ್ಟೂ 3,000 ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಒಂದನೇ ಮತ್ತು 2ನೇ ಡೋಸ್ ಬಾಕಿಯಿರುವವರಿಗೆ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಕೋವಿಶೀಲ್ಡ್ ಮೊದಲ ಮತ್ತು ಎರಡನೇ ಡೋಸ್ ಲಭ್ಯ:
3,000 ಡೋಸ್ ಕೋವಿಶೀಲ್ಡ್ ಲಸಿಕೆಯಲ್ಲಿ ಮೊದಲ ಡೋಸ್ ಹಾಗು ಎರಡನೇ ಡೋಸ್ ಬಾಕಿಯಿರುವವರಿಗೆ ಅವಕಾಶವಿದ್ದು, ತಾಲೂಕಿನ ದಾಸನಕೊಪ್ಪದಲ್ಲಿ 300, ಬನವಾಸಿ 200, ಬಿಸಲಕೊಪ್ಪ 300, ಸುಗಾವಿ 200, ಹುಲೇಕಲ್ 300, ಸಾಲ್ಕಣಿ 300, ರೇವಣಕಟ್ಟಾ 150, ಕಕ್ಕಳ್ಳಿ 100, ಮೆಣಸಿ 50, ಹೆಗಡೆಕಟ್ಟಾ 300, ವಾರ್ಡ್ ನಂ.11, 12, 13, 24 ನೇ ಜನರಿಗೆ ನಗರದ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ 400 ಡೋಸ್ ಲಸಿಕೆ ಲಭ್ಯವಿದೆ. ಮತ್ತು 400 ಡೋಸ್ ಲಸಿಕೆಯನ್ನು ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನೀಡಲಾಗುವುದು.
ಕೋವ್ಯಾಕ್ಸಿನ್ ಮೊದಲ ಡೋಸ್ ಲಭ್ಯ:
ತಾಲೂಕಿನಲ್ಲಿ 700 ಡೋಸ್ ಕೋವ್ಯಾಕ್ಸಿನ್ ಲಭ್ಯವಿದ್ದು, ಅದನ್ನು ಕಾನಗೋಡಿನಲ್ಲಿ 400, ಉಂಚಳ್ಳಿಯಲ್ಲಿ 200, ಬನವಾಸಿಯಲ್ಲಿ 100 ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.