
ಸಿದ್ದಾಪುರ: ಪಟ್ಟಣದ ಇಂಡೇನ್ ಗ್ಯಾಸ್ ಏಜೆನ್ಸಿಯಲ್ಲಿ ಜು.27ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳತನ ನಡೆದ ಎರಡುದಿನಗಳಲ್ಲಿ ಪೋಲೀಸರು ಕಳ್ಳರನ್ನು ಬಂಧಿಸಿದ್ದು ಗ್ಯಾಸ್ ಏಜೆನ್ಸಿಯ ಕೆಲಸಗಾರ ಶಿಗ್ಗಾಂವಿಯ ಚಂದ್ರು ಮಲ್ಲೇಶಪ್ಪ ತಿಡ್ಡೇನವರ್(32) ಹಾಗೂ ಏಜೆನ್ಸಿಯ ಲಾರಿಚಾಲಕ ಬೇಡ್ಕಣಿಯ ಮುಕುಂದ ಹನುಮಂತ ಮಡಿವಾಳ(30) ಬಂಧಿತ ಆರೋಪಿಗಳಾಗಿದ್ದಾರೆ. ಇವರು ಇಂಡೇನ್ ಗ್ಯಾಸ್ ಏಜೆನ್ಸಿಯಿಂದ 18ಖಾಲಿ ಸಿಲಿಂಡರುಗಳನ್ನು ಕಳ್ಳತನ ಮಾಡಿದ್ದರು ಎನ್ನಲಾಗಿದೆ.
ಬಂಧಿತರಿಂದ 41,400ರೂ ಮೌಲ್ಯದ 18ಖಾಲಿ ಸಿಲಿಂಡರ್ ಹಾಗೂ ಕಳ್ಳತನಕ್ಕೆ ಬಳಸಿದ್ದ 40,000ರೂ ಮೌಲ್ಯದ ಸ್ಟಾರ್ ಸಿಟಿ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.
ಈ ಶೋಧಕಾರ್ಯದಲ್ಲಿ ಹಿರಿಯ ಪೋಲೀಸ್ ನಿರೀಕ್ಷಕ ಮಂಜೇಶ್ವರ ಚಂದಾವರ, ಪಿಎಸ್ಸೈ ಮಹಾಂತಪ್ಪ ಕುಂಬಾರ ಹಾಗೂ ಸಿಬ್ಬಂದಿಗಳಾದ ಗಂಗಾಧರ ಹೊಂಗಲ , ರಮೇಶ ಕೂಡಲ, ರವಿ ಜಿ ನಾಯ್ಕ ಭಾಗವಹಿಸಿದ್ದರು.