
ಸಿದ್ದಾಪುರ: ಲಯನ್ಸ್ ಕ್ಲಬ್ ಶಿರಸಿ ವತಿಯಿಂದ ಸಿದ್ದಾಪುರದ ಕಾನಸೂರು, ಸರಕುಳಿ ಭಾಗದಲ್ಲಿ ನೆರೆಯಿಂದ ಹಾನಿಗೊಳಗಾದವರಿಗೆ ಧನಸಹಾಯ ಹಾಗೂ ಅವಶ್ಯಕ ವಸ್ತುಗಳನ್ನು ನೀಡಲಾಯಿತು.
ಲಯನ್ಸ್ ಕ್ಲಬ್ ವತಿಯಿಂದ ನೆರೆಯಿಂದಾಗಿ ಮನೆ ಆಸ್ತಿ ಕಳೆದುಕೊಂಡ ಕರ್ಜಗಿಯ ಮಹಾಬಲೇಶ್ವರ ಗೌಡ ಹಾಗೂ ಸರಕುಳಿಯ ಶಂಕರ ಗೌಡ ಕುಟುಂಬಗಳಿಗೆ ತಲಾ 30,000ರೂ ಗಳ ಚೆಕ್ ಅನ್ನು ವಿತರಿಸಿ ಅವರಿಗೆ ಧೈರ್ಯ ತುಂಬಲಾಯಿತು. ಹಾಗೂ ಬಟ್ಟೆ, ಔಷಧಿ ಮುಂತಾದ ಜೀವನಾವಶ್ಯಕ ಸಾಮಗ್ರಿಗಳನ್ನು ವಿತರಿಸಲಾಯಿತು.
ಹಾಗೂ ಮನೆ ಕಳೆದುಕೊಂಡು ಸಾಕಷ್ಟೂ ನಷ್ಟ ಅನುಭವಿಸಿರುವ ಬಾಳೂರಿನ ಗಣಪತಿ ಭಟ್ ಅವರಿಗೆ 20,000ರೂ ಚೆಕ್ ವಿತರಿಸಿ ಧನಸಹಾಯ ಮಾಡಲಾಯಿತು ಹಾಗೂ ಜೀವನಾವಶ್ಯಕ ಸಾಮಗ್ರಿಗಳನ್ನು ವಿತರಿಸಿ ಸಾಂತ್ವನ ಹೇಳಲಾಯಿತು.
ಮತ್ತು ಗ್ರಾಮ ಪಂಚಾಯತ ಸದಸ್ಯರ ಮೂಲಕ ಗಂಜಿಕೇಂದ್ರಕ್ಕೆ ಔಷಧ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಉದಯ್ ಸ್ವಾದಿ, ಲಯನ್ಸ ಕಾರ್ಯದರ್ಶಿ ಲ. ವಿನಯ ಹೆಗಡೆ, ಕೋಶಾಧ್ಯಕ್ಷೆ ಲ. ಅನಿತಾ ಹೆಗಡೆ, ಹಿರಿಯ ಸದಸ್ಯರುಗಳಾದ ಲ.ತ್ರಿವಿಕ್ರಮ ಪಟವರ್ಧನ, ಲ. ಶ್ರೀಕಾಂತ ಹೆಗಡೆ, ಲ. ಶ್ಯಾಮಸುಂದರ ಭಟ್, ಲ. ಬಾಬುಲಾಲ ಚೌಧರಿ, ಲ. ರಮಾ ಪಟವರ್ಧನ್, ಲ ಜ್ಯೊತಿ ಭಟ್, ಲ. ಗುರುರಾಜ ಹೊನ್ನಾವರ, ಲ.ಅಶ್ವಥ್ಥ ಹೆಗಡೆ ಹಾಗೂ ಲ. ಜ್ಯೊತಿ ಹೆಗಡೆ ಉಪಸ್ಥಿತರಿದ್ದರು.