• first
  second
  third
  previous arrow
  next arrow
 • ಆ.1ಕ್ಕೆ ಎಸಳೆ ಮಾರಿಕಾಂಬಾ ವನದಲ್ಲಿ ಸಹಸ್ರ ವೃಕ್ಷಾರೋಪಣ

  300x250 AD

  ಶಿರಸಿ: ಇಲ್ಲಿಯ ಯೂತ್ ಫಾರ್ ಸೇವಾ ಸಂಸ್ಥೆಯ ಅಡಿಯಲ್ಲಿ ಶ್ರೀ ಮಾರಿಕಾಂಬಾ ದೇವಾಲಯ ಮತ್ತು ಬಾಬದಾರ ಮುಖ್ಯಸ್ಥರು, ಅರಣ್ಯ ಇಲಾಖೆ, ಎಸಳೆ ಗ್ರಾಮಸ್ಥರ ಸಹಯೋಗದಲ್ಲಿ ಎಸಳೆ ಗ್ರಾಮದಲ್ಲಿರುವ ಶ್ರೀ ಮಾರಿಕಾಂಬಾ ವನದಲ್ಲಿ ಅ.1 ರ ಬೆಳಿಗ್ಗೆ 9.30 ಕ್ಕೆ ವಿವಿಧ ಜಾತಿಯ ಒಂದು ಸಾವಿರ ಗಿಡ ನೆಡುವ ‘ಸಹಸ್ರ ವೃಕ್ಷಾರೋಪಣ’ ಕಾರ್ಯಕ್ರಮ ನಡೆಯಲಿದೆ.
  ಶಿರಸಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದತ್ತಾತ್ರಯ ಎಂ. ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ, ಯೂತ್ ಫಾರ್ ಸೇವಾದ ಪೆÇ್ರಜೆಕ್ಟ್ ಮೆನೇಜರ್ ಸಂತೋಷ ಶಾನಭಾಗ, ಶಿರಸಿ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ, ಶ್ರೀ ಮಾರಿಕಾಂಬಾ ದೇವಾಲಯದ ಅಧ್ಯಕ್ಷ ರವೀಂದ್ರ ನಾಯ್ಕ, ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಮಹಾದೇವ ದೇವಾಡಿಗ ಪಾಲ್ಗೊಳ್ಳುವರು. ಯೂತ್ ಫಾರ್ ಸೇವಾ ಸಂಚಾಲನಾ ಸಮಿತಿಯ ಡಾ. ಆರ್. ವಾಸುದೇವ, ಡಾ. ಶ್ರೀಕಾಂತ ಗುನಗಾ, ಡಾ. ಗಣೇಶ ಹೆಗಡೆ, ವಕೀಲ ಕರುಣಾಕರ ಹೆಗಡೆಕಟ್ಟಾ, ನಾಟಿ ವೈದ್ಯೆ ಶೋಭಾ ಹೆಗಡೆ ತಾರಗೋಡು, ಪೆÇ್ರ ಡಾ ಸತೀಶ ನಾಯ್ಕ ಉಪಸ್ಥಿರಿರುತ್ತಾರೆ.
  ಇದೇ ಸಂದರ್ಭದಲ್ಲಿ ಸರಕಾರಿ ನರ್ಸರಿಗಳ ಉಸ್ತುವಾರಿಗಳಾದ ಜಾನ್ಮನೆ ವಲಯದ ದತ್ತಾತ್ರಯ ನಾಯ್ಕ, ಕ್ಯಾದಗಿ ನರ್ಸರಿಯ ದ್ಯಾವಾ ನಾಯ್ಕ, ಕಳವೆ ನರ್ಸರಿಯ ನಾರಾಯಣ ಗೌಡ ಹಾಗೂ ಹುಬ್ಬಳ್ಳಿಯ ಪರಿಸರ ಕಾರ್ಯಕರ್ತ ಮೇಘರಾಜ ಕೆರೂರ ಅವರುಗಳಿಗೆ ಸನ್ಮಾನಿಸಲಾಗುವದು. ಹೆಚ್ಚಿನ ಮಾಹಿತಿಗಾಗಿ ಚಂದ್ರು ಎಸಳೆ 9945032425, ಉಮಾಪತಿ ಭಟ್ 9380866154 ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top