ಕುಮಟಾ: ಪಟ್ಟಣದ 21 ನೇ ವಾರ್ಡಿನಲ್ಲಿ ಉದ್ಭವಗೊಂಡ ಕೋವಿಡ್-19 ವ್ಯಾಕ್ಸಿನ್ ಕೊರತೆಯ ಕುರಿತು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಹರ್ಮಲ್ಕರ ಶಾಸಕ ದಿನಕರ ಶೆಟ್ಟಿಯವರ ಗಮನಸೆಳೆದ ತಕ್ಷಣವೇ ವ್ಯಾಕ್ಸಿನ್ ಪೂರೈಸುವ ಮೂಲಕ ಶಾಸಕರು ಜನಪರ ಕಾಳಜಿ ಮೆರೆದಿದ್ದಾರೆ.
21 ನೇ ವಾರ್ಡಿನಲ್ಲಿ ಕೋವಿಡ್ ವ್ಯಾಕ್ಸಿನ್ ಕೊರೆತೆಯುಂಟಾಗಿ ಹಲವರು ಪರದಾಡುವಂತಾಗಿತ್ತು. ಇದನ್ನು ಮನಗಂಡ ಪುರಸಭಾ ಸದಸ್ಯ ಅನಿಲ ಹರ್ಮಲಕರ್ ಶಾಸಕ ದಿನಕರ ಶೆಟ್ಟಿಯವರ ಬಳಿ ವ್ಯಾಕ್ಸಿನ್ ಪೂರೈಸುವಂತೆ ವಿನಂತಿಸಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಶಾಸಕ ದಿನಕರ ಶೆಟ್ಟಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಹೆಚ್ಚಿನ ಮುತುವರ್ಜಿ ವಹಿಸಿ, ಶೀಘ್ರದಲ್ಲೇ ಜನತೆಗೆ ವ್ಯಾಕ್ಸಿನ್ ಒದಗಿಸಿದ್ದಾರೆ. ಶಾಸಕರ ಕಾರ್ಯಕ್ಕೆ 21 ನೇ ವಾರ್ಡಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಅನಿಲ ಹರ್ಮಲಕರ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರಿದ್ದರು.
ಕೊರೊನಾ ವ್ಯಾಕ್ಸಿನ್ ಪೂರೈಸಿದ ಶಾಸಕ ದಿನಕರ ಶೆಟ್ಟಿಗೆ ಮೆಚ್ಚುಗೆ