• Slide
    Slide
    Slide
    previous arrow
    next arrow
  • ಕೆಎಮ್‍ಎಫ್ ಅಧ್ಯಕ್ಷರಾಗಿ ಶಂಕರ ಮುಗದ ಆಯ್ಕೆ; ಸುರೇಶ್ಚಂದ್ರ ಕೆಶಿನ್ಮನೆ ಹರ್ಷ

    300x250 AD

    ಶಿರಸಿ: ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಶಂಕರ ಮುಗದ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿರುವುದು ನಿಜಕ್ಕೂ ಸಂತಸದ ವಿಚಾರವೆಂದು ಧಾರವಾಡ ಹಾಲು ಒಕ್ಕೂಟದ ಶಿರಸಿ ಭಾಗದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅಭಿಪ್ರಾಯ ಪಟ್ಟಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಾಲು ಒಕ್ಕೂಟದ ಸದಸ್ಯರ ಮತ್ತು ಹೈನುಗಾರರ ಅಭಿವೃದ್ಧಿ ಪರ ದೃಢ ನಿಲುವು ಹೊಂದಿರುವ ಕಾರಣಕ್ಕೆ ಮುಗದರವರು ಎರಡನೇ ಬಾರಿ ಕೆಎಮ್‍ಎಫ್ ಅಧ್ಯಕ್ಷ ಗಾದಿಯನ್ನು ಅಲಂಕರಿಸಿದ್ದಾರೆ. ಅವರ ಆಡಳಿತಾವಧಿಯಲ್ಲಿ ಒಕ್ಕೂಟದ ಸಮಗ್ರ ಅಭಿವೃದ್ಧಿಯ ಜೊತೆಗೆ ಹೈನುಗಾರರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ನೂತನ ಯೋಜನೆಯನ್ನು ಕಾರ್ಯಗತಗೊಳಿಸುತ್ತಾರೆ ಎಂಬ ನಂಬಿಕೆ ನಮ್ಮದು. ಹೈನುಗಾರಿಕೆಯ ಸಮಗ್ರ ಅಭಿವೃದ್ಧಿ ಮತ್ತು ದೂರದೃಷ್ಟಿಯ ಕಾರಣಕ್ಕೆ ಅಧಿಕಾರಕ್ಕೇರಿರುವ ಮುಗದರವರಿಂದ ಜಿಲ್ಲೆಯ ಹೈನುಗಾರರಿಗೂ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುವಂತೆ ಪ್ರಯತ್ನಿಸುವುದಾಗಿ ಅವರು ತಿಳಿಸಿದ್ದಾರೆ.

    300x250 AD

    ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಶಂಕರ ಮುಗದರವರನ್ನು ಅಭಿನಂದಿಸಿವುದರ ಜೊತೆಗೆ ಅವರ ಮಾರ್ಗದರ್ಶನದಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸುವುದಾಗಿ ಅವರು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top