
ಅಡುಗೆ ಮನೆ: ಬೇಕಾಗುವ ಸಾಮಗ್ರಿ: ಅನ್ನ -2 ಕಪ್, ಮುಕ್ಕಾಲು ಕಪ್ ತೆಂಗಿನತುರಿ, ಚಿಟಿಕೆ-ಇಂಗು, 3 ಟೇಬಲ್ ಸ್ಪೂನ್ ನಷ್ಟು ಎಣ್ಣೆ, ಅರ್ಧ ಟೀ ಸ್ಪೂನ್ -ಸಾಸಿವೆ, 1 ಟೇಬಲ್ ಸ್ಪೂನ್-ಉದ್ದಿನಬೇಳೆ, ಅರ್ಧ ಟೇಬಲ್ ಸ್ಪೂನ್-ಕಡಲೇಬೇಳೆ, 10 ಎಸಳು-ಕರಿಬೇವು, 4 ಟೇಬಲ್ ಸ್ಪೂನ್ ಕಡಲೇಬೀಜ, 4-ಹಸಿಮೆಣಸು, ಸಣ್ಣನೆಲ್ಲಿ ಕಾಯಿ ಗಾತ್ರದಷ್ಟು-ಹುಣಸೇಹಣ್ಣು, 3-ಒಣಮೆಣಸು, ಮುಕ್ಕಾಲು ಟೀ ಸ್ಪೂನ್ – ಸಾಸಿವೆ, ಅರ್ಧ ಟೇಬಲ್ ಸ್ಪೂನ್-ಬೆಲ್ಲ, ಚಿಟಿಕೆ ಅರಿಸಿನ, ರುಚಿಗೆ ತಕ್ಕಷ್ಟು ಉಪ್ಪು, 3 ಟೇಬಲ್ ಸ್ಪೂನ್ ನಷ್ಟು ನೀರು,
ಮಾಡುವ ವಿಧಾನ: ಮಿಕ್ಸಿ ಜಾರಿಗೆ ಕಾಯಿತುರಿ, ಸಾಸಿವೆ, ಬೆಲ್ಲ, ಮಣಸಿನಕಾಯಿ, ಹುಣಸೆಹಣ್ಣು, ಉಪ್ಪು, ಅರಿಶಿನ ಹಾಕಿ ರುಬ್ಬಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ, ಇಂಗು, ಕಡಲೇಬೇಳೆ, ಉದ್ದಿನಬೇಳೆ, ಕಡಲೆಬೀಜ ಹಾಕಿ. ನಂತರ ಇದಕ್ಕೆ ಕರಿಬೇವು ಹಾಕಿ, ನಂತರ ರುಬ್ಬಿಟ್ಟುಕೊಂಡ ಮಿಶ್ರಣ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದ ನೀರು ಆವಿಯಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಉರಿಯನ್ನು ಕಡಿಮೆ ಮಾಡಿಟ್ಟುಕೊಂಡು ಅನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ 5 ನಿಮಿಷ ಗ್ಯಾಸ್ ಮೇಲೆ ಸಣ್ಣ ಉರಿಯಲ್ಲಿ ಹಾಗೇ ಇಡಿ. ನಂತರ ಗ್ಯಾಸ್ ಆಫ್ ಮಾಡಿ ಸರ್ವ್ ಮಾಡಿ.