
ಹಳಿಯಾಳ: ಕೃಷಿ ಪ್ರಧಾನ ತಾಲೂಕಾದ ಹಳಿಯಾಳ-ಜೋಯಿಡಾದಲ್ಲಿ `ಕೃಷಿ ಅಭಿಯಾನ ವಾಹನ’ಕ್ಕೆ ಶಾಸಕ ಆರ್.ವಿ ದೇಶಪಾಂಡೆ ಇಂದು ಚಾಲನೆ ನೀಡಿದರು.
ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಈಗಾಗಲೇ ಗರಿಗೆದರಿವೆ. ಕೃಷಿ ಇಲಾಖೆಯು ರೈತರಿಗೆ ಅಗತ್ಯ ಮಾಹಿತಿಗಳನ್ನು ನೀಡಲು ಸಿದ್ಧವಾಗಿದ್ದು, ಕೃಷಿಗೆ ಸಂಬಂಧಪಟ್ಟ ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮತ್ತಿತರ ಇಲಾಖೆಯಿಂದ ರೈತರಿಗೆ ಆಗುವ ಉಪಯೋಗ ಕುರಿತು ಹಳ್ಳಿಹಳ್ಳಿಗಳಲ್ಲಿ ಸಂಚರಿಸಿ ಇವರು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.