
ಬೆಂಗಳೂರು: ಕಾರವಾರದ ಬೈತಕೋಲ್ ವಾಣಿಜ್ಯ ಬಂದರಿನ ಎರಡನೇ ಹಂತದ ಅಭಿವೃದ್ಧಿಗೆ ಕರ್ನಾಟಕ ರಾಜ್ಯಮಾಲಿನ್ಯ ಮಂಡಳಿಯು ನೀಡಿರುವ ಅನುಮತಿ ಕಾನೂನು ಬಾಹಿರ ವಾಗಿದ್ದು ಹೊಸದಾಗಿ ಅನುಮತಿ(ಸಿ ಎಫ಼್ ಇ) ನೀಡುವ ಪ್ರಕ್ರಿಯೆ ಪ್ರಾರಂಭಿಸಲು ಹೈಕೋರ್ಟ್ ಅನುಮತಿ ನೀಡಿದೆ.
ಹೈಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಜಸ್ಟೀಸ್ ಅಭಯ್ ಶ್ರೀನಿವಾಸ ಓಕಾ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಕಾರವಾರದ ಬೈತಕೋಲ್ ವಾಣಿಜ್ಯ ಬಂದರಿನ ಎರಡನೇ ಹಂತದ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ ನೀಡಿರುವ ಅನುಮತಿಯು ಕಾನೂನು ಬಾಹಿರ ಎಂದು ಪರಿಗಣಿಸಿದೆ.
ಉತ್ತರಕನ್ನಡ ಜಿಲ್ಲಾ ಮೀನುಗಾರ ಸಂಘಗಳ ಒಕ್ಕೂಟದ ಪಿಐಎಲ್ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಪೀಠವು
ಮಾಲಿನ್ಯ ನಿಯಂತ್ರಣಕ್ಕೆ ಸಂಭಂಧಿಸಿದಂತೆ ಎಲ್ಲಾ ನಿಯಮಗಳನ್ನು ಪಾಲಿಸುವ ಮೂಲಕ ಕಾರವಾರ ಬಂದರು ಅಧಿಕಾರಿ ಸಿ ಎಫ಼್ ಇ ಪಡೆಯುವುದಕ್ಕಾಗಿ ಅರ್ಜಿಯನ್ನು ಪರಿಗಣಿಸಲು ಹೊಸದಾಗಿ ಪರಿಶೀಲನೆ ಹಾಗೂ ಪ್ರಕ್ರಿಯೆ ಕೈ ಗೊಳ್ಳಲು ರಾಜ್ಯ ಮಾಲಿನ್ಯ ಮಂಡಳಿ ನೀಡಿದ್ದ ಮನವಿಗೆ ಒಪ್ಪಿಗೆ ಸೂಚಿಸಿದೆ.
ಇದನ್ನು ಹೊರತುಪಡಿಸಿ ಮೀನುಗಾರ ಸಂಘಗಳ ಒಕ್ಕೂಟವು ಯೋಜನೆಯ ವಿರುದ್ಧ ನೀಡಿದ್ದ ಇತರ ಎಲ್ಲ ಆಕ್ಷೇಪಗಳನ್ನು ತಿರಸ್ಕರಿಸುವ ಮೂಲಕ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಹಾಗೂ ರಾಜ್ಯ ಮಟ್ಟದ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರವು 2019ರ ಜನವರಿಯಲ್ಲಿ ನೀಡಿದ್ದ ಪರಿಸರ ಅನುಮತಿಯ ಎಲ್ಲಾ ನಿಯಮಗಳನ್ನು ಮತ್ತು ಷರತ್ತುಗಳನ್ನು ಪಾಲಿಸಲಾಗಿರುವ ಕುರಿತು ಖಾತ್ರಿ ಪಡಿಸಿಕೊಳ್ಳುವಂತೆ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಹಾಗೂ ರಾಜ್ಯ ಮಾಲಿನ್ಯ ಮಂಡಳಿಯು ಹೊಸ ಸಿ ಎಫ಼್ ಇ ನೀಡುವವರೆಗೆ ಎರಡನೇ ಹಂತದ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಸಿಎಫ್‌ಇ ನೀಡುವಲ್ಲಿ ಕೆಎಸ್‌ಪಿಸಿಬಿ ಅಳವಡಿಸಿಕೊಂಡ ಪ್ರಕ್ರಿಯೆಯಲ್ಲಿ ಕಾರ್ಯವಿಧಾನದ ಲೋಪ ನಡೆದಿದ್ದು ಸ್ಥಾಪನೆಗೆ ಒಪ್ಪಿಗೆ ನೀಡುವ ಸಲುವಾಗಿ ಕೆಎಸ್‌ಪಿಸಿಬಿ ವ್ಯವಹರಿಸಿದ ವಿಧಾನ ಆಘಾತಕಾರಿಯಾಗಿದೆ ಸಂಬಂಧಿತ ಅಂಶಗಳನ್ನು ಪರಿಗಣಿಸದಿರುವುದು ಮತ್ತು ಕಾನೂನು ಬಾಹಿರ ನಿರ್ಧಾರ ತೆಗೆದುಕೊಳ್ಳುವ ಮೂಲಕ ಇಡೀ ಪ್ರಕ್ರಿಯೆಯು ಕಾನೂನು ಬಾಹಿರವಾಗಿದೆ,” ಎಂದು ಹೈಕೋರ್ಟ್ ಹೇಳಿದೆ.
ಕೆಎಸ್‌ಪಿಸಿಬಿ ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯದ ವಿರುದ್ಧ ಕಾವಲುಗಾರನಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ಆದರೆ ಈ ಸಂದರ್ಭದಲ್ಲಿ ಸಂಬಂಧಪಟ್ಟ ಕಾಯಿದೆಯನ್ನು ನಿರ್ಲಕ್ಷಿಸುವ ಮೂಲಕ ಅತ್ಯಂತ ಸಾಂದರ್ಭಿಕ ರೀತಿಯಲ್ಲಿ ವರ್ತಿಸಿದೆ ಎಂದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕಾ ಅವರಿದ್ದ ದ್ವಿ ಸದಸ್ಯ ಪೀಠ ತನ್ನ ಮಹತ್ವದ ತೀರ್ಪಿನಲ್ಲಿ ಮೀನುಗಾರರ ಅರ್ಜಿ ತಿರಸ್ಕರಿಸಿದ್ದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಬಹುದು,” ಎಂದು ಕರ್ನಾಟಕ ರಾಜ್ಯ ಮೆರಿಟೈಮ್ ಬೋರ್ಡ್‌ಗೆ ಸೂಚಿಸಿದೆ.