• Slide
    Slide
    Slide
    previous arrow
    next arrow
  • ಭಾಷೆಯ ಮೇಲೆ ಅಭಿಮಾನವಿರಲಿ: ಡಾ. ಆರ್.ಜಿ.ಹೆಗಡೆ

    300x250 AD

    ಶಿರಸಿ: ಎಮ್.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ಕನ್ನಡ ಮತ್ತು ಇಂಗ್ಲೀಷ ವಿಭಾಗದಿಂದ ಇತ್ತೀಚೆಗೆ ಕ್ವಿಜ್' ಮತ್ತುಭಾಷಾ ಕೌಶಾಲ್ಯಾಭಿವೃದ್ದಿ’ ಕುರಿತು ರಾಜ್ಯಮಟ್ಟದ ವೆಬಿನಾರ್ ನಡೆಯಿತು.
    ಬಂಗೂರು ನಗರ ಪದವಿ ಮಹಾವಿದ್ಯಾಲಯ, ದಾಂಡೇಲಿಯ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ. ಆರ್.ಜಿ.ಹೆಗಡೆ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಷೆಯ ಮೇಲೆ ಪ್ರತಿಯೊಬ್ಬರಿಗೂ ಅಭಿಮಾನವಿರಬೇಕು. ಮುಖ್ಯವಾಗಿ ಭಾಷೆ, ಸಾಹಿತ್ಯ, ವ್ಯವಹಾರ ಮತ್ತು ಜೀವನಕ್ಕಾಗಿ ಎಂಬ ವಿಷಯವನ್ನು ಸವಿವರವಾಗಿ ವ್ಯಕ್ತಪಡಿಸಿದರು. ಮುಂದುವರಿದು ವಿದ್ಯಾರ್ಥಿಗಳಿಗೆ ಓದು, ಬರವಣಿಗೆ, ಕೇಳುವಿಕೆ ಇವುಗಳನ್ನು ರೂಢಿಗತಗೊಳಿಸಿಕೊಳ್ಳಬೇಕೆಂಬ ಹಿತವಚನ ಕೊಡುತ್ತಾ ಮಹಾತ್ಮಾ ಗಾಂಧೀಜಿ ಮತ್ತು ಹಿಟ್ಲರ್ ಇವರ ಭಾಷಾ ಕೌಶಲ್ಯದ ವಿವರದ ಜೊತೆಗೆ ಸಾದರಪಡಿಸಿದರು.
    ಕಾರ್ಯಕ್ರಮದಲ್ಲಿ ಪ್ರೊ. ಎಸ್.ಎಸ್. ಬಾಡಗಾಂವಕರ ಇವರು ಅತಿಥಿಗಳನ್ನು ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳನ್ನು ಸವಿತಾ ರವೀಂದ್ರನಾಥ ಮಾಡಿದರೆ ಕೊನೆಯಲ್ಲಿ ಗೀತಾ ವಿಜಯ್ ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top