ಶಿರಸಿ: ತಾಲೂಕಿನ ಹೆಗಡೆಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರ್ ವಿ ದೇಶಪಾಂಡೆ ಹಾಗೂ ಪ್ರಶಾಂತ ದೇಶಪಾಂಡೆ ತಮ್ಮ ವಿ.ಆರ್.ಡಿ.ಎಂ.ಟ್ರಸ್ಟ್ ವತಿಯಿಂದ ನೀಡಿದ ಆಕ್ಸಿಜನ್ ಕಾನ್ಸಟ್ರೇಟರ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ನೀಡಿದ ಆರೋಗ್ಯ ಕಿಟ್‌ನ್ನು ಗುರುವಾರ ವಿತರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ ಕೆ ಭಾಗ್ವತ್ ಮಾತನಾಡಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೋರೋನ ಸಂದರ್ಭದಲ್ಲಿ ಅವರು ನೀಡಿದ ಸೇವೆಯನ್ನು ಶ್ಲಾಘಿಸಿದರು. ಆರ್ ವಿ ದೇಶಪಾಂಡೆ ಜಿಲ್ಲೆಯಾದ್ಯಂತ ಆಸ್ಪತ್ರೆಗೆ, ವೈದ್ಯರಿಗೆ, ಸಿಬ್ಬಂದಿಗಳಿಗೆ, ಕೋರೋನ ವಾರಿಯರ್ಸ್ ಗಳಿಗೆ ನೀಡಿದ ಆರೋಗ್ಯ ಕಿಟ್, ವೈದ್ಯಕೀಯ ಸಲಕರಣೆಗಳ ಕುರಿತು ವಿವರಣೆ ನೀಡಿ ಕಳೆದ 40 ವರ್ಷಗಳಿಂದ ತಮ್ಮ ದೂರದೃಷ್ಟಿ ನಾಯಕತ್ವ ಮತ್ತು ಜನಸಾಮಾನ್ಯರ ಮೇಲೆ ಇರುವ ಕಳಕಳಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಯನ್ನು ಉಲ್ಲೇಖಿಸಿ ಅವರ ನಾಯಕತ್ವ ಜಿಲ್ಲೆಯ ಜನ ಸದಾ ಬಯಸುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಗೌಡ, ಕಾಂಗ್ರೆಸ್ ಮುಖಂಡರಾದ ಅಬ್ಬಾಸ್ ತೊನ್ಸೆ, ವಿನಾಯಕ ಭಟ್, ಕಲೀಲ ಗೌಡಳ್ಳಿ, ಮುಂತಾದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವಿ.ಆರ್.ಡಿ.ಎಂ.ಟ್ರಸ್ಟ್‌ನಿಂದ ಹೆಗಡೆಕಟ್ಟಾ ಆರೋಗ್ಯ ಕೇಂದ್ರಕ್ಕೆ ಕಾನ್ಸಟ್ರೇಟರ್- ಆರೋಗ್ಯ ಕಿಟ್ ವಿತರಣೆ
