• first
    second
    third
    previous arrow
    next arrow
  • Trending Now

    ಸಂಸ್ಕೃತ ಕೇವಲ ಭಾಷೆಯಲ್ಲ, ಜ್ಞಾನ ಸಮುದ್ರ; ಡಾ.ರಾಮಚಂದ್ರ ಭಟ್

    300x250 AD

    ಶಿರಸಿ: ಸಂಸ್ಕೃತ ಕೇವಲ ಭಾಷೆ ಅಲ್ಲ ಅದರ ಒಳಗಿರುವ ವಿಷಯ ಅಗಾಧವಾದದ್ದು ಅದು ಜ್ಞಾನ ಸಮುದ್ರ ಎನ್ನುವದಾಗಿದೆ. ಭಾಷೆಯನ್ನು ಬಿಟ್ಟು ಭಾಷೆಯ ಒಳಗಿರುವ ವಿಷಯದ ಬಗ್ಗೆ ರಾಷ್ಟ್ರೀಯ ಶಿಕ್ಷಣ ನೀತಿ ಲಕ್ಷ ಹಾಕಿದೆ ಎಂದು ಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ರಾಮಚಂದ್ರ ಭಟ್ ಹೇಳಿದರು.
    ಅವರು ಎಂಇಎಸ್ ನ ಎಮ್ ಎಮ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ IQAC ಹಾಗೂ ಸಂಸ್ಕೃತ ವಿಭಾಗ’ದಿಂದ ಆಯೋಜಿಸಲ್ಪಟ್ಟ ವೆಬಿನಾರ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ’ರಾಷ್ಟ್ರೀಯ ಶಿಕ್ಷಣ ನೀತಿಃ 2020- ಸಂಸ್ಕೃತ ವ್ಯಾಪ್ತಿಃ – ಪರಾಮರ್ಶಃ’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಸಂಸ್ಕೃತ ಬಳಕೆಯಿಂದ ಮಾತ್ರವೇ ಸಂಸ್ಕೃತಿಯನ್ನು ಉಳಿಸಿಕೊಳ್ಳಬಹುದು ಮತ್ತು ಆಧುನಿಕ ಶಿಕ್ಷಣದಲ್ಲಿ ಸಂಸ್ಕೃತವನ್ನು ಅಳವಡಿಸುವ ಮೂಲಕ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಬಹುದು ಎಂದರು.
    ವೆಬಿನಾರ್ ನಲ್ಲಿ ಉಪಸ್ಥಿತರಿದ್ದ ಡಾ.ಗಣೇಶ ಪಂಡಿತ್ (ಸಹಾಯಕ ಪ್ರಾಧ್ಯಾಪಕರು, ರಾಜೀವ್ ಗಾಂಧಿ ಪರಿಸರ ಶೃಂಗೇರಿ) ಮಾತನಾಡಿ ಸಂಸ್ಕೃತಕ್ಕೆ ಭಾಷಾ ಮಟ್ಟದಲ್ಲಿ ಅವಕಾಶ ಕಡಿಮೆ ಇದ್ದರು ಜ್ಞಾನ ಮಟ್ಟದಲ್ಲಿ ಹೆಚ್ಚಿನ ಅವಕಾಶ ಕೊಡಲಾಗಿದೆ. ಹಾಗು ಸಂಸ್ಕೃತ ಅಧ್ಯಾಪಕರಲ್ಲಿ ಕೇವಲ ಭಾಷಾ ಅಧ್ಯಾಪಕರು ಮಾತ್ರ ಅಲ್ಲ ಬೇರೆ-ಬೇರೆ ಕೌಶಲ್ಯದ ಅಭಿವೃದ್ಧಿಗೂ ಸಂಸ್ಕೃತವು ಪೂರಕವಾಗಿದೆ ಎಂದು ತಿಳಿಸಿದರು. ಡಾ.ವಿನಯಚಂದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
    ಕಾಲೇಜು ಪ್ರಾಚಾರ್ಯೆ ಡಾ ಕೋಮಲಾ ಭಟ್ ಪ್ರಾಸ್ತಾವಿಸಿ ಸ್ವಾಗತಿಸಿದರು, ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ವಿನಾಯಕ ಭಟ್ ನಿರೂಪಿಸಿ ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top