
ಅಂಕೋಲಾ: ತಾಲೂಕಿನ ಕಲ್ಲೇಶ್ವರದ ಸ್ಮಿತಾ ರಾಘವೇಂದ್ರ ಭಟ್ಟ ಅವರ `ಕನಸು ಕನ್ನಡಿ’ ಗಜಲ್ ಸಂಕಲನಕ್ಕೆ ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನವು ನೀಡುವ ‘ಸಾಹಿತ್ಯ ಶರಭ ಪ್ರಶಸ್ತಿ’ ಲಭಿಸಿದೆ.
ಕನ್ನಡ ಪುಸ್ತಕ ಪ್ರಧಿಕಾರದಿಂದ ಇವರ ಚೊಚ್ಚಲ ಕೃತಿ ಆಯ್ಕೆ ಆಗಿದೆ. ಇವರು ಅನೇಕ ಪತ್ರಿಕೆಗಳಲ್ಲಿ ಇವರ ಕವಿತೆ ಹಾಗೂ ಗಜಲ್, ಲೇಖನಗಳು ಪ್ರಕಟಗೊಂಡಿವೆ. ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಇವರಿಗೆ ಊರವರು, ಬಂಧು- ಮಿತ್ರರು ಹರ್ಷ ವ್ಯಕ್ತಪಡಿಸಿದ್ದಾರೆ.