ಅಂಕೋಲಾ: ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಮೊದಲು ಲಸಿಕೆ ನೀಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಆದೇಶ ನೀಡಿದ್ದಾರೆ.
ಉತ್ತರಕನ್ನಡ ಪ್ರವಾಹ ಪರಿಶೀಲನೆಗೆ ಆಗಮಿಸಿದ್ದ ಸಿಎಂ ಬೊಮ್ಮಾಯಿ ಅವರ ಬಳಿ ಮೀನುಗಾರರ ವತಿಯಿಂದ ಕೋವಿಶೀಲ್ಡ್ ಲಸಿಕೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಮೀನುಗಾರಿಕೆಗೆ ಗೋವಾ ರಾಜ್ಯಕ್ಕೆ ತೆರಳಲು ಲಸಿಕೆ ಅಗತ್ಯವಾಗಿದ್ದು ಮೀನುಗಾರರಿಗೆ ಆದ್ಯತೆ ನೀಡಲು ಕೋರಿಕೊಳ್ಳಲಾಗಿತ್ತು. ಈ ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಮೀನುಗಾರರಿಗೆ ಲಸಿಕೆ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಮತ್ತು ಮೀನುಗಾರರಿಗಾಗಿಯೇ 9,000 ಲಸಿಕೆ ಒದಗಿಸಲಾಗಿದ್ದು ಕೂಡಲೇ ಲಸಿಕಾಕರಣ ಪ್ರಕ್ರಿಯೆ ನಡೆಸುವಂತೆ ಸೂಚಿಸಿದ್ದಾರೆ.