
ಸಿದ್ದಾಪುರ: ತಾಲೂಕಿನಲ್ಲಿ ಕೊರೊನಾ ವ್ಯಾಕ್ಸಿನ್ ನೀಡಲು ಕ್ಯಾಂಪ್ ಆಯೋಜನೆ ಮಾಡಿ ನೀಡಲಾಗುತ್ತಿದ್ದು, ಜು.30 ಶುಕ್ರವಾರ ಒಟ್ಟೂ 800 ಡೋಸ್ ವ್ಯಾಕ್ಸಿನ್ ಲಭ್ಯವಿದೆ. ಅದನ್ನು ಆದ್ಯತೆಯ ಮೇರೆಗೆ 2ನೇ ಡೋಸ್ ಬಾಕಿಯಿರುವವರಿಗೆ ನೀಡಲಾಗುತ್ತದೆ.
ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಯಾದಿಗಿಯಲ್ಲಿ 100, ಪ್ರಾಥಮಿಕ ಆರೋಗ್ಯ ಕೇಂದ್ರ ಬಿಳಿಗಿಯಲ್ಲಿ 100, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೊಡ್ಮನೆ 100, ಪ್ರಾಥಮಿಕ ಆರೋಗ್ಯ ಕೇಂದ್ರ ಕಾನಸೂರಿನಲ್ಲಿ 100, ಪ್ರಾಥಮಿಕ ಆರೋಗ್ಯ ಕೇಂದ್ರ ಕೂರ್ಲಕೈ 100,ಪ್ರಾಥಮಿಕ ಆರೋಗ್ಯ ಕೇಂದ್ರ ಹೇರೂರು 100, ಹಿರಿಯ ಪ್ರಾಥಮಿಕ ಶಾಲೆ ಬಾಲಿಕೊಪ್ಪ ಸಿದ್ದಾಪುರದಲ್ಲಿ 200 ಡೋಸ್ ನೀಡಲಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಸಿದ್ದಾಪುರ ಅವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.