
ಯಲ್ಲಾಪುರ: ತಾಲೂಕಿನ ವಿವಿಧೆಡೆ ನೆರೆ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಭೇಟಿ ನೀಡಿ ಹಾನಿ ಪರಿಶೀಲಿಸಿದರು.
ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ತಳಕೆಬೈಲ್ ಬಳಿ ರಸ್ತೆ ಕುಸಿದ ಸ್ಥಳವನ್ನು ಪರಿಶೀಲಿಸಿದರು. ಕಳಚೆ ಭಾಗದ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಉಂಟಾದ ಭೂಕುಸಿತ, ಅತಿವೃಷ್ಟಿಯಿಂದ ಆದ ಅನಾಹುತಗಳ ಕುರಿತು ವಿವರಿಸಿದರು.
ನಂತರ ಅರಬೈಲ್ ಘಟ್ಟ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿದಿರುವ ಸ್ಥಳವನ್ನು ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಿದರು. ಗುಳ್ಳಾಪುರದಲ್ಲಿ ಸೇತುವೆ ಕುಸಿದ ಸ್ಥಳ ಪರಿಶೀಲಿಸಿದರು. ಅಲ್ಲಿನ ಜನರ ಸಮಸ್ಯೆಗಳ ಕುರಿತು ಶಾಸಕ ಶಿವರಾಮ ಹೆಬ್ಬಾರ ಗಮನ ಸೆಳೆದರು.