
ಶಿರಸಿ: ತಾಲೂಕಿನಲ್ಲಿ ಕೊರೊನಾ ವ್ಯಾಕ್ಸಿನ್ ವಿತರಣೆಗೆ ಕ್ಯಾಂಪ್‍ಗಳನ್ನು ಆಯೋಜಿಸಿ ನೀಡಲಾಗುತ್ತಿದ್ದು, ಜು.30 ಮಂಗಳವಾರ ಶಿರಸಿ ತಾಲೂಕಿನಲ್ಲಿ ಒಟ್ಟೂ 1,500 ಡೋಸ್ ಕೋವಿಶೀಲ್ಡ್ ಲಸಿಕೆಯಿದ್ದು, ಅದನ್ನು 2 ನೇ ಡೋಸ್ ಬಾಕಿಯಿರುವವರಿಗೆ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಒಟ್ಟೂ 1500 ಡೋಸ್ ಲಸಿಕೆಯಲ್ಲಿ ಶಿರಸಿ ನಗರದ ವಾರ್ಡ್ – 16, ವಾರ್ಡ್ – 17, ವಾರ್ಡ್ – 21, ವಾರ್ಡ್ – 22 ನ ನಿವಾಸಿಗಳಿಗೆ ಪ್ರತಿ ವಾರ್ಡ್ ಗೆ ತಲಾ 100 ಲಸಿಕೆಯಂತೆ 400 ಲಸಿಕೆಯನ್ನು ಹುಬ್ಬಳ್ಳಿ ರಸ್ತೆಯಲ್ಲಿನ ಆಯುಷ್ ಆಸ್ಪತ್ರೆ (ಕೋಟೆಕೆರೆ) ಸಮೀಪವಿರುವ ಬಿ ಆರ್ ಅಂಬೇಡ್ಕರ್ ಭವನದಲ್ಲಿ ನೀಡಲಾಗುತ್ತದೆ.
300 ಲಸಿಕೆಯನ್ನು ಯಲ್ಲಾಪುರ ರಸ್ತೆಯಲ್ಲಿರುವ (ಡೆವಲಪ್ಮೆಂಟ್ ಪೆಟ್ರೋಲ್ ಬಂಕ್ ಎದುರು) ಡಾ. ಬಿ ಆರ್ ಅಂಬೇಡ್ಕರ ಭವನದಲ್ಲಿ ನೀಡಲಾಗುವುದು.
ಇನ್ನುಳಿದಂತೆ ತಾಲೂಕಿನ ದಾಸನಕೊಪ್ಪದಲ್ಲಿ 200, ಬಿಸಲಕೊಪ್ಪ 200, ಹುಲೇಕಲ್ 200, ಹೆಗಡೆಕಟ್ಟಾ 200 ಡೋಸ್ ವ್ಯಾಕ್ಸಿನ್ ಸೌಲಭ್ಯ ದೊರೆಯಲಿದೆ.