
ಶಿರಸಿ: ಡೆಂಘೀ ರೋಗದ ನಿಯಂತ್ರಣ ಮಾಡಿಕೊಳ್ಳಲು ಎಲ್ಲರ ಸಹಕಾರ ಅಗತ್ಯ ಎಂದು ತಾಲೂಕು ವೈದ್ಯಾಧಿಕಾರಿ ಡಾ.ವಿನಾಯಕ ಕಣ್ಣಿ ಹೇಳಿದರು.
ಅವರು ಗುರುವಾರ ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಡೆಂಘಿ ರೋಗ ನಿಯಂತ್ರಣ ಕುರಿತು ಗ್ರಾ.ಪಂ ಪಿಡಿಓಗಳಿಗೆ, ತಾಲೂಕು ಮಟ್ಟದ ಇತರ ಇಲಾಖೆಗಳ ಅಧಿಕಾರಿಗಳಿಗೆ ಹಮ್ಮಿಕೊಂಡ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಸೀಯಾಳ, ಬಾಟಲಿ, ತೊಟ್ಟಿ, ಟಾಯರ್ಸನಲ್ಲಿ ಒಂದು ಚಮಚ ನೀರಿದ್ದರೂ ಡೆಂಘೀ ಸೊಳ್ಳೆ ಬೆಳೆಯುತ್ತದೆ. ವಿಪರೀತ ಜ್ವರ, ತಲೆನೋವು, ಕೀಲು ನೋವು ಕಾಣುತ್ತವೆ. ಇದು ಕಂಡು ಬಂದರೆ ತಕ್ಷಣ ವೈದ್ಯರನ್ನು ಕಾಣಬೇಕು ಎಂದು ಸಲಹೆ ಮಾಡಿದರು.
ಆಯುಷ್ ವೈದ್ಯಾಧಿಕಾರಿ ಡಾ. ಜಗದೀಶ ಯಾಜಿ ಮಾತನಾಡಿ, ರೋಗ ಬರಿಸಿಕೊಳ್ಳುವದಕ್ಕಿಂತ ಮುನ್ನ ಸೊಳ್ಳೆ ನಿಯಂತ್ರಣ ಮಾಡಿಕೊಂಡರೆ ಅಪಾಯವಿಲ್ಲ. ಬೇವಿನ ಸೊಪ್ಪು, ಲಕ್ಕಿ ಸೊಪ್ಪಿನ ಹೊಗೆ ಹಾಕಿ ಸೊಳ್ಳೆ ನಿಯಂತ್ರಣ ಮಾಡಬಹುದು ಎಂದರು.
ಉಪನ್ಯಾಸ ನೀಡಿದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಏಫ್.ಎಸ್.ಡಿಸೋಜಾ, ಡೆಂಘೀ ರೋಗದ ಹರಡುವಿಕೆ, ರೋಗದ ಲಕ್ಷಣಗಳು ಮುಂಜಾಗೃತೆ ಕುರಿತು ಮಾತನಾಡಿದರು.
ತಾಲೂಕು ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣವರ್ ಅಧ್ಯಕ್ಷತೆ ವಹಿಸಿದ್ದರು.
ಸಿಡಿಪಿಓ ದತ್ತಾತ್ರಯ ಎಂ ಭಟ್ಟ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೌರಿ ನಾಯ್ಕ, ಕಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಸಿ.ಟಿ.ಬಸಯ್ಯ, ಪ್ರೇಮಾನಾಥ, ಶ್ರೀವಿಜಯ ಇತರರು ಇದ್ದರು.