
ಅಡುಗೆ ಮನೆ: ಬೇಕಾಗುವ ಸಾಮಾಗ್ರಿ: 500 ಗ್ರಾಂ ಗೋಧಿ ಹಿಟ್ಟು, 300 ಗ್ರಾಂ ತುಪ್ಪ, 500 ಗ್ರಾಂ ಸಕ್ಕರೆ, 100 ಎಂ.ಎಲ್ ನೀರು, 50 ಗ್ರಾಂ ಒಣದ್ರಾಕ್ಷಿ, 1 ಟೀ ಸ್ಪೂನ್- ಏಲಕ್ಕಿ ಪುಡಿ, ಚಿಕ್ಕದಾಗಿ ಕತ್ತರಿಸಿದ ಬಾದಾಮಿ.
ಮಾಡುವ ವಿಧಾನ: ಸಕ್ಕರೆ ಮತ್ತು ನೀರನ್ನು ಒಂದು ಪಾತ್ರೆಗೆ ಹಾಕಿಕೊಂಡು ಮಧ್ಯಮ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ, ಸಕ್ಕರೆ ಕರಗುವವರೆಗೆ ಚೆನ್ನಾಗಿ ಕುದಿಸಿಕೊಳ್ಳಿ ನಂತರ ಗ್ಯಾಸ್ ಆಫ್ ಮಾಡಿ ಇದನ್ನು ಒಂದು ಬದಿಗೆ ಇಟ್ಟುಕೊಳ್ಳಿ. ನಂತರ ಒಂದು ಪ್ಯಾನ್ ಗೆ ಸ್ವಲ್ಪ ತುಪ್ಪ ಹಾಕಿಕೊಳ್ಳಿ, ತುಪ್ಪ ಬಿಸಿಯಾದಾಗ ಅದಕ್ಕೆ ಸ್ವಲ್ಪ ಸ್ವಲ್ಪವೇ ಗೋಧಿಹಿಟ್ಟು ಹಾಕಿ, ತಳ ಹತ್ತದಂತೆ ಜಾಗೃತಿ ವಹಿಸಿ, ಕಡಿಮೆ ಉರಿಯಲ್ಲಿ ನಿಧಾನಕ್ಕೆ ಕೈಯಾಡಿಸುತ್ತಾ ಇರಿ, ಹಿಟ್ಟು, ಪರಿಮಳ ಬರುವವರೆಗೆ ಚನ್ನಾಗಿ ಹುರಿಯಿರಿ.
ನಂತರ ಇದಕ್ಕೆ ಮಾಡಿಟ್ಟುಕೊಂಡ ಸಕ್ಕರೆಯ ಪಾಕವನ್ನು ಹಾಕಿ ಚೆನ್ನಾಗಿ ತಿರುಗಿಸಿ, ಗ್ಯಾಸ್ ಉರಿಯನ್ನು ನಿಧಾನಕ್ಕೆ ಇಟ್ಟು ಕೈಯಾಡಿಸುತ್ತಾ ಇರಿ. ಇದಕ್ಕೆ ಏಲಕ್ಕಿ ಪುಡಿ, ಬಾದಾಮಿ, ದ್ರಾಕ್ಷಿಯನ್ನು ಸೇರಿಸಿ ಚೆನ್ನಾಗಿ ತಿರುಗಿಸಿ. ಹಲ್ಮಾದ ಹದಕ್ಕೆ ಬಂದಾಗ ಗ್ಯಾಸ್ ಆಫ್ ಮಾಡಿ, ಬಿಸಿ ಬಿಸಿ ಇರುವಾಗಲೇ ತಿನ್ನುವುದಕ್ಕೆ ಚೆನ್ನಾಗಿ ಇರುತ್ತದೆ.