• Slide
    Slide
    Slide
    previous arrow
    next arrow
  • ಠೇವಣಿ ವಿಮೆ ಲಕ್ಷ ರೂ.ಗಳಿಂದ 5 ಲಕ್ಷಕ್ಕೆ ಏರಿಕೆ; ಸಚಿವೆ ನಿರ್ಮಲಾ ಸೀತಾರಾಮನ್

    300x250 AD

    ನವದೆಹಲಿ: ಕೇಂದ್ರ ಸಚಿವ ಸಂಪುಟವು ವಿಮೆ ಮತ್ತು ಸಾಲ ಖಾತರಿ ನಿಗಮ ಮಸೂದೆ ಮತ್ತು ಸೀಮಿತ ಹೊಣೆಗಾರಿಕೆ ಸಹಭಾಗಿತ್ವ ತಿದ್ದುಪಡಿ ಮಸೂದೆಗೆ ಸಮ್ಮತಿ ನೀಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
    ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರಾದ ಅನುರಾಗ್ ಠಾಕೂರ್, ಎಲ್. ಮುರುಗನ್ ಅವರು ಮಾಹಿತಿ ನೀಡಿದ್ದು, ಕೇಂದ್ರ ಸಚಿವ ಸಂಪುಟದಿಂದ ಈ ತಿದ್ದುಪಡಿ ಮಸೂದೆಗೆ ಸಹಮತ ದೊರಕಿದೆ ಎಂದು ತಿಳಿಸಿದ್ದಾರೆ.
    ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಲಾ, ಈ ತಿದ್ದುಪಡಿ ಬಳಿಕ ಬ್ಯಾಂಕ್‍ನಲ್ಲಿ ಹಣ ಕೂಡಿಟ್ಟವರಿಗೆ ಸಿಗುತ್ತಿದ್ದ 1 ಲಕ್ಷ ವಿಮೆಯನ್ನು 5 ಲಕ್ಷ ರೂ. ಗಳಿಗೆ ಏರಿಕೆ ಮಾಡಲಾಗುತ್ತದೆ. ಯಾವುದೇ ಬ್ಯಾಂಕುಗಳು ಮೊರಟೋರಿಯಂ ಅವಧಿಯಲ್ಲಿ ಇದ್ದಾಗ ಅವರಿಗೆ ಗ್ರಾಹಕರ ವ್ಯವಹಾರವನ್ನು ನಿರ್ವಹಣೆ ಮಾಡಲು ಸಾಧ್ಯವಾಗದಿದ್ದ ಸಮಯದಲ್ಲಿ ಇಲ್ಲಿ ಠೇವಣಿಯನ್ನು ಇಟ್ಟ ಗ್ರಾಹಕರು ಕ್ರೆಡಿಟ್ ಗ್ಯಾರಂಟಿ ಕಾಪೆರ್Çೀರೇಷನ್ act- 1961 ತಿದ್ದುಪಡಿಯ ಮೂಲಕ 5 ಲಕ್ಷ ರೂ.ವರೆಗೆ ವಿಮಾ ಮೊತ್ತ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top