
ಕುಮಟಾ: ತಾಲೂಕಿನ ಜೀವನದಿ ಅಘಾನಶಿನಿ ನದಿಯ ಉಪ್ಪುನೀರನ್ನು ತಡೆದು ಶುದ್ಧ ನೀರು ಆಣೆಕಟ್ಟು ನಿರ್ಮಾಣ ಮಾಡುವ ಕುರಿತು ಶಾಸಕ ದಿನಕರ ಶೆಟ್ಟಿಯವರು ಬುಧವಾರ ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್‍ನ ಅಧಿಕಾರಿಗಳೊಂದಿಗೆ ಚರ್ಚಿಸಿ, ಡಿ.ಪಿ.ಆರ್ ತಯಾರಿಸಲು ಸೂಚನೆ ನೀಡಿದ್ದಾರೆ.
ಅಘಾನಶಿನಿ ನದಿಗೆ ಪ್ರವೇಶಿಸುವ ಉಪ್ಪು ನೀರನ್ನು ತಡೆದು, ಶುದ್ಧ ನೀರು ಶೇಖರಿಸುವ ಆಣೆಕಟ್ಟು ನಿರ್ಮಾಣ ಮಾಡುವುದರಿಂದ ತಾಲೂಕಿನ 9 ಗ್ರಾಮ ಪಂಚಾಯತಿಗಳಿಗೆ ಸಿಹಿನೀರು ಸರಬರಾಜು ಮಾಡಬಹುದಾಗಿದ್ದು, ಇದರಿಂದ ತಾಲೂಕಿನ ರೈತರ ಕೃಷಿ ಚಟುವಟಿಕೆಗಳಿಗೂ ಇನ್ನಷ್ಟು ಪೆÇ್ರೀತ್ಸಾಹ ದೊರೆಯಲಿದೆ. ಈ ಯೋಜನೆಯನ್ನು ಶೀಘ್ರದಲ್ಲೇ ಒದಗಿಸುವುದರ ಕುರಿತು ಅವರು ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್‍ನ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಬಗ್ಗೆ ಮಾತನಾಡಿದ ಅವರು, ಬಹುಪಯೋಗಿ ಶುದ್ಧ ನೀರು ಶೇಖರಿಸುವ ಆಣೆಕಟ್ಟು ನಿರ್ಮಾಣ ಯೋಜನೆಯನ್ನು ಮಂಜೂರಿ ಮಾಡಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.