ಕಾರವಾರ: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಜು.03ರ ಬೆಳಿಗ್ಗೆ 10.30ಕ್ಕೆ ನಗರದ ಜಿಲ್ಲಾ ರಂಗಮಂದಿರದಲ್ಲಿ ಎಸ್.ಸಿ/ಎಸ್.ಟಿ ನೌಕರರ ಒಕ್ಕೂಟದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳು ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.
ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು: ಕಾರವಾರ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಸೌಭಾಗ್ಯ ಬಿ.ತೋಳೆ, ಎಸ್.ಸೌಜನ್ಯ, ಚೈತ್ರಾ ಎಂ.ಕುಮಟಗಿ, ಚೈತ್ರಾ ಎಂ.ನಾಯಕ, ದಿವ್ಯಾ ಆರ್.ಕಾಂಬಳೆ, ರಶ್ಮಿ ಆರ್.ಬಾಂದೇಕರ, ಅರ್ಪಿತಾ ಪಿ.ನಾಯ್ಕ, ದ್ವಿತೀಯ ಪಿಯುನಲ್ಲಿ ಗಗನ ಎನ್.ನಾಯ್ಕ, ಮಯೂರೇಶ ಎಸ್.ಚಂದಾವರ, ಪ್ರೀತಿ ಸಿ.ಬಿಸನಳ್ಳಿ, ಶ್ರೇಷ್ಠಾ ಎಸ್.ಮಾಜಾಳಿಕರ, ಅಂಕೋಲಾ ತಾಲೂಕಿನಿಂದ ಎಸ್‌ಎಸ್‌ಎಲ್‌ಸಿಯಲ್ಲಿ ನಿರ್ಮಿತಕುಮಾರ ಕೇಣಿ, ದತ್ತಾತ್ರೇಯ ಎಸ್.ಹಳ್ಳೇರ, ರಾಮಕುಮಾರ ರಾಠೋಡ, ಮನೋಜ ಕಪಲೇರ, ರೋಹಿತ ಗೋಸಾವಿ, ದ್ವಿತೀಯ ಪಿಯುನಲ್ಲಿ ಸುಮಾ ಎಚ್.ಲಮಾಣಿ, ನೇತ್ರಾ ಸಿ.ಆಗೇರ, ಭೂಮಿಕಾ ಎಂ.ಕೇಣಿ, ಕುಮಟಾ ತಾಲೂಕಿನಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಭತರಕುಮಾರ ಎ., ಶಿವಾನಿ ಎಸ್.ಬೇವಿನಮಟ್ಟಿ, ದ್ವಿತೀಯ ಪಿಯುನಲ್ಲಿ ದೀಪಾ ಮೂರುಮುತ್ತು, ಹರ್ಷಾ ಎನ್.ಮುಕ್ತಿ, ರಾಜಾ ನಾಯಕ, ಹೊನ್ನಾವರದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಸವಿತಾ ಎಸ್.ನಾಯ್ಕ, ತೇಜಸ್ವಿನಿ ಎಸ್.ನಾಯ್ಕ, ದ್ವಿತೀಯ ಪಿಯುನಲ್ಲಿ ಮೇಧಾ ಐ.ಹಳ್ಳೇರ, ದೀಪಾ ಎಂ.ಮುಕ್ರಿ, ನಾಗರಾಜ ಜೆ.ಮುಕ್ರಿ, ಭಟ್ಕಳದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಜ್ವಲ ರಾಮರಥ, ದ್ವಿತೀಯ ಪಿಯುವಿನಿಂದ ಸಹನಾ ಪಿ., ಪ್ರಿಯಾಂಕಾ ಕೆ.ಎಂ. ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ.
ಶಿರಸಿ ತಾಲೂಕಿನ ಎಸ್‌ಎಸ್‌ಎಲ್‌ಸಿ ವಿದಾರ್ಥಿಗಳಾದ ಸುಕ್ಷಿತ ಎಸ್.ಆಗೇರ, ಹೇಮಂತ ಡಿ.ಚಲವಾದಿ, ರಕ್ಷಿತಾ ಎಸ್.ಬಡಣ್ಣನವರ, ರಕ್ಷಿತಾ ಪಿ.ಬೇಡರ, ದ್ವಿತೀಯ ಪಿಯುವಿನ ಸಹನಾ ಎಸ್.ಚವ್ಹಾಣ, ಬೃಂದಾ ಎಂ.ಕಾನಡೆ, ಆದಿತ್ಯಾ ಡಿ.ನೇತ್ರಾಕರ, ಪ್ರದೀಪ ಎನ್.ತಳವಾರ, ಮರೆಪ್ಪಾ ಕೆ.ಮರೆಕ್ಕಾ, ಕಾವೇರಿ ಎಸ್.ದೊಡ್ಡಮನಿ, ಸಂತೋಷ ಸಿದ್ದಿ, ಸುಮಿತ ಎಂ., ಹಳಿಯಾಳ- ದಾಂಡೇಲಿಯಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಜ್ವಲ ಎಸ್.ಬಿರಾದಾರ, ಅಂಕಿತ ಮೆಟಗಾರ, ಪ್ರಜ್ವಲ ತೆಗ್ಗಿನ, ರುತುಷ್ ಚಲವಾದಿ, ವೈಭವ ಪಗಡ, ದ್ವಿತೀಯ ಪಿಯುವಿನಲ್ಲಿ ಸೀಮಾ ಲಮಾಣಿ, ಪ್ರಜ್ವಲ ಭಜಂತ್ರಿ, ವೆರೊನಿಕಾ ದೊಡ್ಮನಿ, ಮುಂಡಗೋಡ ತಾಲೂಕಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಶೀಲಾ ಎನ್.ತಳವಾರ, ದ್ವಿತೀಯ ಪಿಯುವಿನ ಪ್ರವೀಣ ಎನ್.ಲಮಾಣಿ, ಸಹನಾ ಎಚ್.ಸಿಂದಗಿ, ರಾಧಾ ಬಿ.ವಾಲಿಕಾರ, ಸಿಂಧು ಆಗಸಿಮನಿ, ಸುಷ್ಮಾ ರಾಮಣ್ಣವರ, ಚೇತನ ಎನ್.ಯು., ಯಲ್ಲಾಪುರ ತಾಲೂಕಿನ ಎಸ್‌ಎಸ್‌ಎಲ್‌ಸಿಯಲ್ಲಿ ಗೋವಿಂದ ಡಿ.ಲಮಾಣಿ, ಮೇಘನಾ ಎಂ.ಆಗೇರ, ದ್ವಿತೀಯ ಪಿಯುವಿನಲ್ಲಿ ಸುನೀತಾ ಡಿ.ಸಿದ್ದಿ, ತಿರುಮಲಾ ಕೆ.ಸಿದ್ದಿ, ನೀಲಮ್ಮ ಎಲ್.ಧೂಳೆಕೊಪ್ಪ, ಸಿದ್ದಾಪುರ ತಾಲೂಕಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಸಂದೇಶ ಎಲ್.ಬೋರಕರ, ಜೊಯಿಡಾ ತಾಲೂಕಿನ ದ್ವಿತೀಯ ಪಿಯು ವಿದ್ಯಾರ್ಥಿಗಳಾದ ಅಶ್ವಿನಿ ಬಿ.ಸತ್ನಾಯಕ ಅವರಿಗೆ ಪುರಸ್ಕರಿಸಲಾಗುತ್ತಿದೆ.
ಕಾರವಾರ ವೈದ್ಯಕೀಯ ಮಹಾವಿದ್ಯಾಲಯ (ಕ್ರಿಮ್ಸ್)ದ ಅಂತಿಮ ವರ್ಷದ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಮೈಸೂರಿನ ಸುವಿಧಾ ಎಂ.ಎನ್., ಡಾ.ದರ್ಶನಪ್ರಸಾದ ಎಂ.ಎಸ್., ಹಾಸನದ ಡಾ.ಪೂಜಾ ಬಿ.ಆರ್., ತುಮಕೂರಿನ ಡಾ.ಶ್ರೀಕಾಂತ ಡಿ., ಶಿವಮೊಗ್ಗದ ಡಾ.ಮಹೇಶ ನಾಯ್ಕ ಅವರಿಗೆ ಗೌರವಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಜಿ.ಡಿ.ಮನೋಜ್ (ಮೊ.ಸಂ: 87626 13441), ಪ್ರಕಾಶ ಚವ್ಹಾಣ (ಮೊ.ಸಂ: 94805 08504) ಅವರುಗಳನ್ನು ಸಂಪರ್ಕಿಸಬಹುದಾಗಿದೆ. ಪುರಸ್ಕಾರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಬಂದು- ಹೋಗುವ ಬಸ್ ಟಿಕೇಟ್ ದರದ ಮೊತ್ತವನ್ನು (ಪಾಲಕರ ಸಹಿತ ಬಂದಲ್ಲಿ ಹೋಗುವ ದರ ಮಾತ್ರ) ನಗದು ರೂಪದಲ್ಲಿ ನೀಡಲಾಗುತ್ತದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.