• first
  second
  third
  previous arrow
  next arrow
 • ಚೈತನ್ಯ ಪಿಯು ಕಾಲೇಜ್ ಪ್ರಾಂಶುಪಾಲ ಆರ್.ಎಮ್.ಭಟ್ ಸ್ವಯಂ ನಿವೃತ್ತಿ

  300x250 AD

  ಶಿರಸಿ; ನಗರದ ಎಂ ಇ ಎಸ್ ನ ಚೈತನ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ 15 ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಘೋಷಿಸಿ ನಿವೃತ್ತರಾದ ಆರ್.ಎಮ್.ಭಟ್ ಅವರನ್ನು ಎಂ.ಇ.ಎಸ್ ಕಛೇರಿಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ಎಂಇಎಸ್ ನ ಗೌರವ ಪ್ರಧಾನ ಕಾರ್ಯದರ್ಶಿ ಎಸ್ ಪಿ ಶೆಟ್ಟಿ ಮಾತನಾಡಿ ಆರ್ ಎಮ್ ಭಟ್ ಅವರ ಸೇವಾ ಮನೋಭಾವನೆ, ಕ್ರಿಯಾಶೀಲತೆ, ಶ್ರಮ ಚೈತನ್ಯ ಮಹಾವಿದ್ಯಾಲಯ ಉತ್ತಮ ಗುಣಮಟ್ಟದಲ್ಲಿ ಬೆಳೆಯಲು ಕಾರಣವಾಯಿತು. ಅವರೊಬ್ಬ ಸಮರ್ಥ ಉತ್ತಮ ಪ್ರಾಧ್ಯಾಪಕರಾಗಿದ್ದರು ಎಂದು ಅವರ ಸೇವೆಯನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಜಿ ಎಂ ಹೆಗಡೆ ಮುಳಖಂಡ, ಉಪಾಧ್ಯಕ್ಷ ಹಾಲಪ್ಪ ಜಕಲಣ್ಣನವರ್, ಖಜಾಂಚಿ ಸುಧೀರ್ ಭಟ್ ಉಪಸಮಿತಿ ಅಧ್ಯಕ್ಷ ನರೇಂದ್ರ ಹೆಗಡೆ ಹೊಂಡಗಾಸಿ ಹಾಗೂ ಪದಾಧಿಕಾರಿಗಳು ಸದಸ್ಯರು, ಕಾಲೇಜಿನ ನೂತನ ಪ್ರಾಚಾರ್ಯರಾದ ರಾಘವೇಂದ್ರ ಹೆಗಡಿಕಟ್ಟ, ಪ್ರಾಧ್ಯಾಪಕ ವೃಂದ ಉಪಸ್ಥಿತರಿದ್ದರು.

  300x250 AD

  Share This
  300x250 AD
  300x250 AD
  300x250 AD
  Back to top