ಸಿದ್ದಾಪುರ: ಸ್ಥಳೀಯ ಲಯನ್ಸ್ ಕ್ಲಬ್‌ನ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ಅಡಿಕೆ ವರ್ತಕರಾದ ಆರ್.ಎಂ.ಪಾಟೀಲ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಯಾಗಿ ಕುಮಾರ ಗೌಡರ್, ಉಪಾಧ್ಯಕ್ಷರುಗಳಾಗಿ ರಾಘವೇಂದ್ರ ಶಾಸ್ತ್ರೀ, ಎಂ.ಆರ್.ಪಾಟೀಲ, ಜಂಟಿ ಕಾರ್ಯದರ್ಶಿಯಾಗಿ ರಾಘವೇಂದ್ರ ಭಟ್, ಖಂಜಾಂಚಿಯಾಗಿ ಆನಂದ ಎಂ.ಶೇಟ್ ಇವರುಗಳನ್ನು ಆಯ್ಕೆ ಮಾಡಲಾಗಿದೆ.
ನಿರ್ದೇಶಕರುಗಳಾಗಿ ಆರ್.ಎಂ.ಹೆಗಡೆ ಬಾಳೇಸರ, ಜಿ.ಜಿ.ಹೆಗಡೆ ಬಾಳಗೋಡ,ಡಾ. ಕೆ.ಶ್ರೀಧರ ವೈದ್ಯ, ಎಂ.ಎಸ್.ಜೋಶಿ, ನಾಗರಾಜ ಪಾಟೀಲ, ಸಿ.ಎಸ್.ಗೌಡರ್, ಸತೀಶ ಎಸ್.ಗೌಡರ್ ಇವರುಗಳನ್ನು ಆಯ್ಕೆ ಮಾಡಲಾಗಿದೆ.