ಕಾರವಾರ: ಜಿಲ್ಲೆಯ ಕಾರವಾರ, ಕುಮಟಾ, ಶಿರಸಿ ಹಾಗೂ ಹಳಿಯಾಳ ತಾಲೂಕುಗಳಲ್ಲಿ ಶಿಶು ಪಾಲನಾ ಕೇಂದ್ರಗಳನ್ನು ಪ್ರಾರಂಭಿಸಲು 6 ವರ್ಷದೊಳಗಿನ ಮಕ್ಕಳ ಸೇವೆಯಲ್ಲಿ ಅನುಭವವುಳ್ಳ ಸಂಘ-ಸಂಸ್ಥೆಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಆಸಕ್ತ ಸಂಸ್ಥೆಯವರು ಅರ್ಜಿಯನ್ನು ನೊಂದಣಿ ಪತ್ರ, ಆಡಿಟ್ ರಿಪೋರ್ಟ್, ಈ ಹಿಂದೆ ಕಾರ್ಯನಿರ್ವಹಿಸಿದ ಮಾಹಿತಿ ಹಾಗೂ ಇತ್ಯಾದಿ ಎಲ್ಲ ದಾಖಲಾತಿಗಳೊಂದಿಗೆ ಜುಲೈ 7ರೊಳಗೆ ಕಾರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸಲ್ಲಿಸಬೇಕು. ಮಹಿಳಾ ಮಂಡಳ ಮತ್ತು ಸ್ವ- ಸಹಾಯ ಸಂಘಗಳಿಂದ ಬರುವಂತಹ ಅರ್ಜಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ಬಂದಿರುವ ಅರ್ಜಿಗಳನ್ನು ಜಿಲ್ಲಾ ಮಟ್ಟದ ಸಮಿತಿಯಲ್ಲಿಟ್ಟು ಆಯ್ಕೆ ಮಾಡಲಾಗುವುದು ಹಾಗೂ ಸಮಿತಿಯ ಆಯ್ಕೆಯೇ ಅಂತಿಮವಾಗಿರುತ್ತದೆ ಎಂದು ಕಾರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.